ಉಡುಪಿ ಜಿಲ್ಲೆಯಲ್ಲಿ ತಗ್ಗಿದ ಕೊರೊನಾ: ಇಂದು 640 ಮಂದಿಗೆ ಪಾಸಿಟಿವ್; ಉಡುಪಿಯ ಮೂವರು ಸಹಿತ ನಾಲ್ವರು ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಕೊರೊನಾ ಇಳಿಕೆಯಾಗಿದ್ದು, 640 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 368, ಕುಂದಾಪುರ ತಾಲೂಕಿನಲ್ಲಿ 155, ಕಾರ್ಕಳ ತಾಲೂಕಿನಲ್ಲಿ‌ 115 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5792ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ 4 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 33 ವರ್ಷದ ಯುವಕ, 65 ವರ್ಷದ ವ್ಯಕ್ತಿ, 67 ವರ್ಷದ ಮಹಿಳೆ ವ್ಯಕ್ತಿಗಳು ಹಾಗೂ ಕಾರ್ಕಳ ತಾಲೂಕಿನ 54 […]

ಕೋವಿಡ್ -19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ನೋಂದಣಿ ರದ್ದು

ಉಡುಪಿ : ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಮ್.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಕೆ.ಪಿ.ಎಮ್.ಇ ಕಮಿಟಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯವರು ಈ ಕಾಲ್ ಸೆಂಟರ್ ಗೆ ಕರೆ ಮಾಡಿ ಕೋವಿಡ್ ಚಿಕಿತ್ಸೆ ಪಡೆಯಬಹುದು

ಉಡುಪಿ : ಜಿಲ್ಲೆಯ ನಾಗರೀಕರು ಕೋವಿಡ್-19 ರೋಗಕ್ಕೆ ತುತ್ತಾದವರು ರಾಜ್ಯ ಸರಕಾರದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಉಡುಪಿ ತಾಲೂಕಿನ ಕಾಲ್‌ಸೆಂಟರ್ ನಂಬರ್ 9663950222/9663957222, ಕುಂದಾಪುರ ತಾಲೂಕಿನ ಕಾಲ್‌ಸೆಂಟರ್ ನಂಬರ್ 6363862122/7483984733 ಹಾಗೂ ಕಾರ್ಕಳ ತಾಲೂಕಿನ ಕಾಲ್‌ಸೆಂಟರ್ ನಂಬರ್ 7411323408/7676227624 ಗೆ ಕರೆ ಮಾಡಿ, ಕಾಲ್‌ಸೆಂಟರ್‌ನ ವೈದ್ಯರು ಸೋಂಕಿತರ ತೊಂದರೆಗಳನ್ನು ತಿಳಿಸಿದ್ದಲ್ಲಿ, ಸೂಕ್ತ ಸೌಲಭ್ಯವಿರುವ ಆಸ್ಪತ್ರೆಯನ್ನು ಹಾಗೂ ಆಂಬುಲೆನ್ಸ್ನ ವ್ಯವಸ್ಥೆ ಇಲ್ಲಿರುತ್ತದೆ. ಕೋವಿಡ್ ರೋಗಿಗಳು ಕಾಲ್‌ಸೆಂಟರ್‌ನ ವೈದ್ಯಾಧಿಕಾರಿಗಳ ಸೂಚನೆ ಪಡೆಯದೇ ಖಾಸಗಿ ಆಸ್ಪತ್ರೆಗೆ […]

ಬ್ಯಾಂಕ್ ಸಾಲ ಮರುಪಾವತಿಗೆ ಕಾಲಾವಕಾಶ ಕೊಡಿ; ಸರ್ಕಾರದ ಮುಂದೆ ಮೊರೆಯಿಡುತ್ತಿರುವ ಜನಸಾಮಾನ್ಯರು

ಕಳೆದ ಬಾರಿ ಕೊರೊನಾ ಪರಿಸ್ಥಿತಿ ಬಿಗಡಾಯಿಸಿದಾಗ ರಾಷ್ಟ್ರ ವ್ಯಾಪಿಯಾಗಿ ಲಾಕ್ ಡೌನ್ ಜಾರಿಗೊಳಿಸಿಲಾಯಿತು. ಆಗ ಕೇಂದ್ರ ಸರಕಾರದ ನಿರ್ಣಯದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ರಾಷ್ಟೀಕೃತ ಬ್ಯಾಂಕುಗಳಿಗೆ ನಿರ್ದೇಶನ ನೀಡಿ ಬ್ಯಾಂಕ್ ಗಳಲ್ಲಿ ಯಾರೆಲ್ಲ ಸಾಲ ಪಡೆದಿದ್ದಾರೊ ಅವರಿಗೆ ಕಂತುಗಳ ಮರುಪಾವತಿಗೆ ಕಾಲಾವಕಾಶ ನೀಡಿ ಸಾಲಗಾರರಿಗೆ ಮರು ಜೀವ ನೀಡಿತ್ತು. ಆದರೆ ಈ ಬಾರಿ ಕೊರೊನಾ ಇನ್ನಷ್ಟು ಬಿಗಡಾಯಿಸಿ ಲಾಕ್ ಡೌನ್ ಜನತಾ ಕಫ್ಯೂ೯ ಮುಂತಾದ ನಿರ್ಬಂಧದಿಂದಾಗಿ ಜನಸಾಮಾನ್ಯರ ಬದುಕು ವ್ಯವಹಾರಗಳೇ ಯಾರು ಊಹಿಸಲಾರದ ಮಟ್ಟಿಗೆ ಅದೇೂಗತಿಗೆ […]

ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಬಡವರಿಗೆ ದಿನಸಿ ಕಿಟ್ ವಿತರಣೆ

ಮಂಗಳೂರು: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಮಾಸಿಕ ಯೋಜನೆಯಾದ ಬಡವು ಯೋಜನೆಯ 14 ಮತ್ತು 15ನೇ ಸೇವಾ ಕಾರ್ಯದ ಅಂಗವಾಗಿ ಬಡಜನರಿಗೆ ದಿನಸಿ ಕಿಟ್ ವಿತರಿಸಲಾಯಿತು. ಮಂಗಳೂರು ಬಜಾಲ್‌ ಸಮೀಪದ ಗುಡ್ಡೆ ಗುತ್ತು ನಿವಾಸಿ ಕಮಲಾ ಪಂಡಿತ್ ಅವರ ಕುಟುಂಬಕ್ಕೆ ಮತ್ತು ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ವಾಸವಾಗಿರುವ ಆಸೀಫ್ ಎಂಬವರ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯೆ ಶೋಭಾ ಪೂಜಾರಿ, ಸ್ಥಳೀಯರಾದ ಮುಖೇಶ್‌ ಪಂಡಿತ್, ನವಾಝ್, […]