ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಂಸಿ ಆಸ್ಪತ್ರೆಯ ಬಾಳಿಗಾ ಬ್ಲಾಕ್ ಬಳಿ ಡಿ.25ರಂದು ನಡೆದ ಒಂಟಿ ಮಹಿಳೆಯ ಬ್ಯಾಗ್ ಕಸಿದುಕೊಂಡು 87 ಸಾವಿರ ಮೌಲ್ಯದ ಸೊತ್ತುಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿದ ಮಣಿಪಾಲ ಪೊಲೀಸರು, ಆರೋಪಿಗಳಾದ ಉದ್ಯಾವರ ಗ್ರಾಮದ ನಿವಾಸಿ ಮಹ್ಮದ್ ಫಹಾದ್ (19) ಹಾಗೂ ಇನ್ನೊರ್ವ ಬಾಲಕನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಈ ಇಬ್ಬರು ಆರೋಪಿಗಳು ಡಿ.25ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಬಾಳಿಗಾ ಬ್ಲಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಅಂಶುಲ್ ಸಿಂಗ್ ಎಂಬ ಮಹಿಳೆಯ ಬ್ಯಾಗ್ ಅನ್ನು ಕಸಿದುಕೊಂಡು ಅದರಲ್ಲಿದ್ದ 4500 ನಗದು ಹಣ, 1 ಎಸ್.ಬಿ.ಐ, 1 ಹೆಚ್ಡಿಎಫ್ಸಿ ಬ್ಯಾಂಕಿನ ಎಟಿಎಂ ಕಾರ್ಡ್, 80 ಸಾವಿರ ಮೌಲ್ಯದ ಆ್ಯಪಲ್ ಐಪೋನ್-10 ಹಾಗೂ 2 ಸಾವಿರ ಮೌಲ್ಯದ ನೋಕಿಯಾ ಮೊಬೈಲ್ ಅನ್ನು ಲೂಟಿಗೈದು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಶೀಘ್ರ ಕಾರ್ಯಾಚರಣೆ ಮಾಡಿದ ಪೊಲೀಸರು ಇಂದು ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ಮಹಿಳೆಯಿಂದ ದೋಚಿದ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಸಹಿತ ಒಟ್ಟು 2.25 ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ReplyForward
|