ಉಡುಪಿ: ಪ್ರಸಕ್ತ ಸಾಲಿನಲ್ಲಿ ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್ಗಾಗಿ, ಪಿ.ಜಿ.ಸಿ.ಇ.ಟಿ ಬರೆಯದೆ ಇರುವ ಬಿ.ಇ, ಮೆಕ್ಯಾನಿಕಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ಆಟೋ ಮೊಬೈಲ್, ಆಟೋಮೇಷನ್, ಮೇರಿನ್ ಇಂಜಿನೀಯರಿಂಗ್ ಮತ್ತು ರೋಬೋಟಿಕ್ಸ್ ಇಂಜಿನೀಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು, ಮೊಬೈಲ್ ನಂ: 9243989954, 9141630303 ಅನ್ನು ಸಂಪರ್ಕಿಸುವಂತೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.