ಕಾರ್ಕಳ: ಆಟೊಗೆ ಕಾರು ಡಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಸಾವು

ಕಾರ್ಕಳ: ಇಲ್ಲಿನ ಮಿಯಾರು ಚರ್ಚ್ ಬಳಿ ಇಂದು ಬೆಳಿಗ್ಗೆ ಆಟೊ ರಿಕ್ಷಾ ಹಾಗೂ ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಮೃತಪಟ್ಟಿದ್ದು, ಆಟೊದಲ್ಲಿದ್ದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಆಟೊ ಚಾಲಕನನ್ನು 54 ವರ್ಷದ ಚಂದ್ರಶೇಖರ ಮಡಿವಾಳ ಎಂದು ಗುರುತಿಸಲಾಗಿದೆ. ಆಟೊದಲ್ಲಿದ್ದ ಪ್ರಯಾಣಿಕ ದಿವಾಕರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರಶೇಖರ್ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದರು. ಮಿಯಾರು ಚರ್ಚ್ ಬಳಿಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಬಜಗೋಳಿ […]

ಕುರ್ಕಾಲು: ಗ್ರಾಮ ಒನ್ ಕೇಂದ್ರ ಉದ್ಘಾಟನೆ

ಕುರ್ಕಾಲು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಕೇಂದ್ರವು ಕುರ್ಕಾಲು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶಂಕರಪುರದಲ್ಲಿ ಇಂದು ಉದ್ಘಾಟನೆಗೊಂಡಿತು. 750 ಕ್ಕೂ ಹೆಚ್ಚಿನ ಸರ್ಕಾರಿ ಸೇವೆಗಳನ್ನು ಒಳಗೊಂಡ ಗ್ರಾಮ ಒನ್ ಕೇಂದ್ರ ಇದಾಗಿದ್ದು, ಆಧಾರ್ , ಇ-ಸ್ಟಾಂಪ್ ಹಾಗೂ ಸೇವಾ ಸಿಂಧುವಿನ ಎಲ್ಲಾ ಸೇವೆಗಳನ್ನು ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒದಗಿಸುವ ಸೇವಾ ವೇದಿಕೆಯಾಗಿದೆ. ರಾಜೇಶ್ ನಾಯ್ಕ್ ಇದರ ವ್ಯವಸ್ಥಾಪಕರಾಗಿದ್ದಾರೆ. ಕಾರ್ಯಕ್ರಮವನ್ನು ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರು ಮಹೇಶ್ ಶೆಟ್ಟಿ ಉದ್ಘಾಟಿಸಿದರು. ಗುರೂಜಿ ಸಾಯಿ […]

ಶಂಕರಪುರ: ಸಾಲ ತೀರಿಸಲಾಗದೆ ಜೀವನದಲ್ಲಿ ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಶಿರ್ವಾ: ಸಾಲ ತೀರಿಸಲಾಗದೆ ಮನನೊಂದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ಇಂದು ಬೆಳಕಿಗೆ ಬಂದಿದೆ. ಕುರ್ಕಾಲು ಗ್ರಾಮದ ಶಂಕರಪುರ ನಿವಾಸಿ 53 ವರ್ಷದ ರಾಜೇಶ್ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ರಿಕ್ಷಾ ಚಾಲಕ ವೃತ್ತಿ ಮಾಡಿಕೊಂಡಿದ್ದು, ಮನೆ ಕಟ್ಟಲು ಬ್ಯಾಂಕ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಸಾಕಷ್ಟು ಕೈ ಸಾಲ ಕೂಡ ಮಾಡಿಕೊಂಡಿದ್ದರು. ಹಾಗೆ ತಾಯಿಗೆ ಸೇರಿದ ಜಾಗವು ಪಾಲು ಆಗಲಿರಲಿಲ್ಲ. ಇದೇ ಖಿನ್ನತೆಯಲ್ಲಿ ತಾನು ಮಾಡಿದ […]

ಗ್ರಾಮ ಒನ್ ನಿಂದ ಗ್ರಾಮೀಣ ಜನತೆಗೆ ಸುಲಭದಲ್ಲಿ ಸರ್ಕಾರಿ ಸೇವೆ: ಸಚಿವ ಎಸ್.ಅಂಗಾರ

ಉಡುಪಿ, ಜನವರಿ 26 (ಕವಾ): ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳಿಗೆ ಗ್ರಾಮೀಣ ಜನತೆ ನಗರ ಪ್ರದೇಶಕ್ಕೆ ಬರುವ ಅಗತ್ಯವಿರದೇ ತಮ್ಮ ಗ್ರಾಮದಲ್ಲಿಯೇ ಅತ್ಯಂತ ಸುಲಭವಾಗಿ ಅಗತ್ಯವಿರುವ ಹಲವಾರು ಸರ್ಕಾರಿ ಸೇವೆಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು. ಅವರು ಇಂದು ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿ, ಮುಖ್ಯಮಂತ್ರಿಗಳೊಂದಿಗೆ […]

ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ: ಬಂಟ ಸಮುದಾಯ ಪ್ರಾಮಾಣಿಕತೆ, ದಕ್ಷತೆ, ವಿಶ್ವಾಸಾರ್ಹತೆ, ಕ್ರಿಯಾಶೀಲತೆಯ ಪ್ರತೀಕ: ಕೇಮಾರು ಶ್ರೀ

ಕಾರ್ಕಳ: ಪ್ರಮಾಣಿಕತೆ, ದಕ್ಷತೆ, ವಿಶ್ವಾರ್ಹತೆ, ಕ್ರಿಯಾಶೀಲತೆ ಹೊಂದಿದ್ದ ಬಂಟ ಸಮುದಾಯವು ನಾಡಿನ ಸಂಸ್ಕೃತಿ ಇದ್ದಂತೆ. ಸಂಸ್ಕೃತಿ ಯಿಂದಾಗಿ ಸಮಾಜದಲ್ಲಿ ಉತ್ಸವಗಳು ಮೂಡಿ ಬರುತ್ತವೆ ಹಾಗೂ ಸಮಾಜದಲ್ಲಿ ಎಲ್ಲರು ಒಗ್ಗಟ್ಟಾಗಿಸಲು ಸಾಧ್ಯವೆಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿ ನುಡಿದರು. ಕುಕ್ಕುಂದೂರು ಜೋಡುರಸ್ತೆಯ ಪ್ರೈಮ್ ಮಾಲ್‌ನ ಒಂದನೇಯ ಮಹಡಿಯಲ್ಲಿ ಪ್ರಾರಂಭಿಸಲಾದ ಬಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ದೀಪ ಪ್ರಜ್ವಲಿಸಿದ ಬಳಿಕ ಉಷಾ ಸೆಲೆಬ್ರೇಶನ್ ಹಾಲ್‌ನಲ್ಲಿ ಜರುಗಿದ್ದ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಉದಯ ಶೆಟ್ಟಿ […]