ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ದರ ಸೋಮವಾರ ಮತ್ತೆ ₹ 25ರಷ್ಟು ಏರಿಕೆಕಂಡಿದ್ದು, ಆ ಮೂಲಕ ತಿಂಗಳ ಆರಂಭದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿತಟ್ಟಿದೆ. 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ ಈಗ ₹ 822ಕ್ಕೆ ತಲುಪಿದೆ.
ಫೆಬ್ರುವರಿಯಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದರಿಂದ ಎಲ್‌ಪಿಜಿ ಬೆಲೆ ಒಟ್ಟು ₹ 100ರಷ್ಟು ಏರಿಕೆ ಆಗಿತ್ತು. ಇದೀಗ ಸೋಮವಾರದ ದರ ಹೆಚ್ಚಳವನ್ನೂ ಸೇರಿಸಿದರೆ 14.2 ಕೆ.ಜಿ ತೂಕದ ಒಂದು ಸಿಲಿಂಡರ್ ಬೆಲೆ ₹ 125ರಷ್ಟು ಏರಿಕೆಯಾಗಿದೆ.
ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮಹಾನಗರಗಳು ಹಾಗೂ ಪ್ರಮುಖ ನಗರಗಳ ಗ್ರಾಹಕರಿಗೆ ಸಬ್ಸಿಡಿ ಸಿಗುತ್ತಿಲ್ಲ.