ಚನ್ನಗಿರಿ ಬಿಜೆಪಿ ಶಾಸಕನ ಪುತ್ರನ ಬಳಿ 7 ಕೋಟಿ 62 ಲಕ್ಷ ರೂ.ಪತ್ತೆ ಮಾಡಿದ ಲೋಕಾಯುಕ್ತ; 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಸ್​ಡಿಎಲ್​ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಟೆಂಡರ್​ ಒಂದಕ್ಕೆ ಸಂಬಂಧಿಸಿದಂತೆ 80 ಲಕ್ಷ ಕಮಿಷನ್​​ ಕೇಳಿದ್ದು ಈ ಸಂಬಂಧ ಮುಂಗಡವಾಗಿ 40 ಲಕ್ಷ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪ್ರಶಾಂತ್ ನನ್ನು ಬಂಧಿಸಿದ್ದರು. ಬಳಿಕ ಪ್ರಶಾಂತ್‌ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದರು. ಈ ವೇಳೆ ಆತನ ಮನೆ ಹಾಗೂ ಕಚೇರಿಗಳಿಂದ 7 ಕೋಟಿ 62 ಲಕ್ಷ ರೂ. ಹಣ ಪತ್ತೆಯಾಗಿದೆ.

ಲಂಚ ಸ್ವೀರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್​ಗೆ 14 ದಿನ ನ್ಯಾಯಾಂಗ ಬಂಧನವಿಧಿಸಲಾಗಿದೆ. ಪ್ರಶಾಂತ್ ಸೇರಿದಂತೆ ಐವರರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಬೆಂಗಳೂರಿನ ಲೋಕಾಯುಕ್ತ ಕೋರ್ಟ್ ಆದೇಶ ಹೊರಡಿಸಿದೆ. ಮಾ.02ರ ಸಂಜೆ ಬೆಂಗಳೂರಿನ ಕ್ರಸೆಂಟ್​ ರಸ್ತೆಯಲ್ಲಿರುವ ಕಚೇರಿಯಲ್ಲಿ ವ್ಯಕ್ತಿಯಿಂದ 40 ಲಕ್ಷ ರೂ ನಗದು ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪ್ರಶಾಂತ್​ನನ್ನು ಬಂಧಿಸಿ ಇಂದು ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನೂ ರೇಡ್ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖಾ ಹಂತ ಪೂರ್ಣಗೊಂಡ ನಂತರ ಲೋಕಾಯುಕ್ತ ಅಧಿಕಾರಿಗಳು ತಮ್ಮ ಸುಪರ್ದಿಗೆ ಕೇಳುವ ಸಾಧ್ಯತೆಗಳಿವೆ. ಸದ್ಯ ಪ್ರಶಾಂತ್ ಮಾಡಾಳ್ ಸೇರಿ ಇನ್ನಿತರ ಐವರಿಗೆ 14 ದಿನಗಳ ಕಾಲ ಜೈಲು ವಾಸ ನಿಗದಿಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಚ್ಚಲಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು, ನಾವು ರಾಜ್ಯದಲ್ಲಿ ಭ್ರಷ್ಟಾಚಾರ ಸಮಗ್ರವಾಗಿ ನಿಗ್ರಹಿಸುವ ಉದ್ದೇಶದಿಂದ ಪುನರಾರಂಭಿಸಿದ್ದೇವು. ಶಾಸಕರ ಪುತ್ರ ಹಣ ಪಡೆದ ವಿಚಾರದ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ ಎಂಬುದು ನಮ್ಮ ನಿಲುವಾಗಿದೆ. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲ ಮಾಡಿದ್ದ ,ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.