ಚನ್ನಗಿರಿ ಬಿಜೆಪಿ ಶಾಸಕನ ಪುತ್ರನ ಬಳಿ 7 ಕೋಟಿ 62 ಲಕ್ಷ ರೂ.ಪತ್ತೆ ಮಾಡಿದ ಲೋಕಾಯುಕ್ತ; 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಸ್​ಡಿಎಲ್​ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಟೆಂಡರ್​ ಒಂದಕ್ಕೆ ಸಂಬಂಧಿಸಿದಂತೆ 80 ಲಕ್ಷ ಕಮಿಷನ್​​ ಕೇಳಿದ್ದು ಈ ಸಂಬಂಧ ಮುಂಗಡವಾಗಿ 40 ಲಕ್ಷ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪ್ರಶಾಂತ್ ನನ್ನು ಬಂಧಿಸಿದ್ದರು. ಬಳಿಕ ಪ್ರಶಾಂತ್‌ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದರು. ಈ ವೇಳೆ ಆತನ ಮನೆ ಹಾಗೂ ಕಚೇರಿಗಳಿಂದ 7 ಕೋಟಿ 62 ಲಕ್ಷ ರೂ. ಹಣ ಪತ್ತೆಯಾಗಿದೆ. ಲಂಚ ಸ್ವೀರಿಸುತ್ತಿದ್ದ […]

ಕೊಡವೂರು: ಕೃಷಿ ಸಮಿತಿ ವತಿಯಿಂದ ಉಚಿತ ತರಕಾರಿ ಬೀಜ ವಿತರಣೆ

ಕೊಡವೂರು: ಲಕ್ಷ್ಮೀನಗರ ಅಂಗನವಾಡಿಯಲ್ಲಿ ಬಾಲ ವಿಕಾಸ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಮಿತಿ ಕೊಡವೂರು ವತಿಯಿಂದ ಉಚಿತವಾಗಿ ತರಕಾರಿ ಬೀಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಸಮಿತಿ ಪ್ರಮುಖರಾದ ಅರುಣ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶುಭಲಕ್ಷ್ಮೀ, ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರೇಮ, ಆಶಾ ಕಾರ್ಯಕರ್ತೆಯರಾದ ಹಿಮ, ಪಾಳೆಕಟ್ಟೆ ಅಂಗನವಾಡಿ ಶಿಕ್ಷಕಿಯಾದ ಪ್ರಭಾವತಿ, ಮತ್ತಿತರರು ಉಪಸ್ಥಿತರಿದ್ದರು.

Udupi:ಮಹಿಳೆಯರಿಗಾಗಿ ಏಂಜೆಲ್ಸ್ zumba ಫಿಟ್ ನೆಸ್ ಕ್ಲಾಸ್

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ನ 5 ನೇ ಮಹಡಿಯಲ್ಲಿ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಪ್ರತಿದಿನ ಬೆಳಗ್ಗೆ 10.30 ರಿಂದ 11.30 ಮತ್ತು ಸಂಜೆ 6.30 ರಿಂದ 7.30 ರವರೆಗೆ ಮಹಿಳೆಯರಿಗಾಗಿ zumba ಫಿಟ್ ನೆಸ್ ತರಗತಿಗಳು ನಡೆಯುತ್ತಿದ್ದು ಆಸಕ್ತರು 9380323108 ಅನ್ನು ಸಂಪರ್ಕಿಸಬಹುದು. https://g.co/kgs/dW2VsH https://instagram.com/ange_lsfitness?igshid=MzRlODBiNWFlZA==

ಗಣಿತನಗರ: ದಿನೇಶ್‌ಎಂ.ಕೊಡವೂರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ನೂತನ ಸಿಇಒ

ಕಾರ್ಕಳ: ಗಣಿತನಗರದಲ್ಲಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ನೂತನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ಪ್ರಾಂಶುಪಾಲ ದಿನೇಶ್. ಎಂ.ಕೊಡವೂರು ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಲಾಗಿದೆ ಎಂದು ಅಜೆಕಾರ್ ಪದ್ಮಗೋಪಾಲ್‌ ಎಜ್ಯಕೇಶನ್‌ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾರ್ಚ್1 ರಂದು ನಡೆದ ಆಡಳಿತ ಮಂಡಳಿ ಮತ್ತು ಎಲ್ಲಾ 240 ಮಂದಿ ಸಂಸ್ಥೆಯ ಉದ್ಯೋಗಿಗಳ ಸಭೆಯಲ್ಲಿ ದಿನೇಶ್‌ಎಂ.ಕೊಡವೂರು ಅಧಿಕಾರ ಸ್ವೀಕರಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಜನಮನ್ನಣೆ: ನಯನಾ ಗಣೇಶ್

ಉಡುಪಿ: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಮುಂದಿನ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಾಗಲಿದೆಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ತಿಳಿಸಿದ್ದಾರೆ. ಅನೇಕ ವರ್ಷಗಳ ಕಾಲ ಪಕ್ಷ ಸಂಘಟನೆ ಕ್ಲಿಷ್ಟಕರವಾಗಿದ್ದ ಈಶಾನ್ಯ ರಾಜ್ಯಗಳಾದ ತ್ರಿಪುರ ಮತ್ತು ನ್ಯಾಗಲ್ಯಾಂಡ್ ಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆ ಜನ ಮನ್ನಣೆ ನೀಡಿದ್ದಾರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿದ್ದು,ಈ ಫಲಿತಾಂಶ ನಮ್ಮೆಲ್ಲ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ. ಕಾಂಗ್ರೆಸ್ ಪಕ್ಷ ಈಶಾನ್ಯ ರಾಜ್ಯಗಳಲ್ಲಿ ಅಸ್ತಿತ್ವವನ್ನು […]