ಬೇಕಾಗಿದ್ದಾರೆ.

ಬ್ರಹ್ಮಾವರ: ತಿಂಡಿ ತಿನಿಸುಗಳ ಲೈನ್ ಸೇಲ್ ಕೆಲಸಕ್ಕೆ TATA ACE ವಾಹನ ಚಲಾಯಿಸಬಲ್ಲ ಡ್ರೈವರ್ ಬೇಕಾಗಿದ್ದಾರೆ. Mob : 9741761153

ಮಾ.12: ಕೋಟೇಶ್ವರದಲ್ಲಿ ಜಿಲ್ಲಾ ಮಹಿಳಾ ಸಮಾವೇಶ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ

ಉಡುಪಿ: ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಮಹಿಳಾ ಸಮಾವೇಶವು ಮಾ.12 ರವಿವಾರ ಮಧ್ಯಾಹ್ನ 3.00 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೇಶ್ವರದ ಕುರುಕ್ಷೇತ್ರ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಡಾ! ಪ್ರಮೋದ್ ಸಾವಂತ್ ರವರು ಬೃಹತ್ ಮಹಿಳಾ ಸಮಾವೇಶವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ನಟಿ ಹಾಗೂ ಬಿಜೆಪಿ ರಾಜ್ಯ ನಾಯಕಿ […]

ವೀಣಾ ಲೀಡಿಯಾ ಲೋಬೊ ಇವರಿಗೆ ಪಿಎಚ್’ಡಿ

ಮಂಗಳೂರು: ಸಂತ ಜೆರೋಸಾ ಪ್ರೌಢಶಾಲೆ, ಜೆಪ್ಪು, ಮಂಗಳೂರು ಇಲ್ಲಿ ಮುಖ್ಯಶಿಕ್ಷಕಿಯಾಗಿರುವ ವೀಣಾ ಲೀಡಿಯಾ ಲೋಬೊ (ಸಿಸ್ಟರ್ ವಿನಿಶಾ) ಇವರು ‘ವಿಮೆನ್ ಇನ್ ಡಯಾಸ್ಪರಾ’ ಎ ಸ್ಟಡಿ ಆಫ್ ಸೆಲೆಕ್ಟ್ ಫಿಕ್ಷನ್ ಬೈ ಕಾಮಿಲಾ ಶಮ್ಸಿ’ ಮಹಾಪ್ರಬಂಧವನ್ನು ಪ್ರೊ. ರವಿಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್’ಡಿ ಪದವಿಯನ್ನು ನೀಡಲಾಗಿದೆ.

ಉಡುಪಿ ಚಿತ್ಪಾಡಿ: ಶ್ರೀ ಶಂಗೇರಿ ಶ್ರೀಗಳ ಭೇಟಿ

ಉಡುಪಿ: ಶ್ರೀ ಶಾರದಾಂಭ ದೇವಸ್ತಾನ ಚಿತ್ಪಾಡಿ ದೇವರ ಸನ್ನಿಧಾನಕ್ಕೆ ಇತ್ತೀಚಿಗೆ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಕರಕಮಲಸಂಜಾತರಾದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ಚಿತ್ತೈಸಿದರು. ಪೂರ್ಣಕುಂಭ ಸ್ವಾಗತದೊಂದಿಗ ಸ್ವಾಗತಿಸಲಾಯಿತು ಶ್ರೀ ಶಾರದಾ ದೇವಿಗೆ ಆರತಿ ಬೆಳಗಿಸಿ ಬಳಿಕ ಭಕ್ತರನ್ನು ಅನುಗ್ರಹಿಸಿದರು. ದೇವಳದ ಜಯರಾಂ ಭಟ್, ಗಣೇಶ್ ಭಟ್, ನೂರಾರು ಭಕ್ತರೂ ಉಪಸ್ಥಿತರಿದ್ದರು.

ಕ್ರಿಯೇಟಿವ್‌ ಕಾಲೇಜಿನ ಇಶಾನ್‌ ಪಿ ಸುಬ್ಬಾಪುರ್‌ ಮಠ್‌ ಗೆ IIT ಪರೀಕ್ಷೆಯಲ್ಲಿ ರ‍್ಯಾಂಕ್‌

ಕಾರ್ಕಳ: ವೃತ್ತಿ ಶಿಕ್ಷಣ ತರಬೇತಿ ನೀಡುವ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ IIT ಬಾಂಬೆಯವರು ನಡೆಸಿದ UCEED ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಇಶಾನ್‌ ಪಿ ಸುಬ್ಬಾಪುರಮಠ್‌ 95.53 ಅಂಕ ಗಳಿಸಿ ಆಲ್‌ ಇಂಡಿಯಾ ರ‍್ಯಾಂಕಿಂಗ್‌ ನಲ್ಲಿ 1919 ನೇ ಸ್ಥಾನ ಪಡೆದಿರುತ್ತಾನೆ. IIT ಯಲ್ಲಿ ಡಿಸೈನ್ಸ್‌ ಕೋರ್ಸ್‌ ನ ಪ್ರವೇಶಾತಿಗಾಗಿ ಜನವರಿ 2023 ರಲ್ಲಿ ನಡೆದ ಪರೀಕ್ಷೆಯಲ್ಲಿ ಇಶಾನ್‌ ಅತ್ಯುತ್ತಮ ಅಂಕಗಳಿಸುವ ಮೂಲಕ ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿರುತ್ತಾನೆ. ವಿದ್ಯಾರ್ಥಿಯ ಈ […]