ಉಡುಪಿ: ಮೂರು ವರ್ಷದ ಪುಟಾಣಿ ಅದ್ರಿಕಾ ಟ್ರಾನ್ಸ್ ಫ್ಯೂಷನ್ ಡಿಪೆಂಡೆಂಟ್ ಥಲಸ್ಸೆಮಿಯಾ ಎಂಬ ರಕ್ತದ ಖಾಯಿಲೆಯಿಂದ ಬಳಲುತ್ತಿದ್ದು, ಈಕೆಗೆ ಜೀವನ ಪರ್ಯಂತ ರಕ್ತ ವರ್ಗಾವಣೆ ಮತ್ತು ಔಷಧಿಯ ಅವಶ್ಯಕತೆ ಇರುತ್ತದೆ. ಈ ಖಾಯಿಲೆಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮಾತ್ರ ಚಿಕಿತ್ಸೆಯಾಗಿದ್ದು ಇದಕ್ಕೆ 30 ಲಕ್ಷ ರೂ ಅಗತ್ಯವಿದೆ.
ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಅದ್ರಿಕಾಗೆ ಪೂರ್ವ ಕಸಿ ಇಮ್ಯುನೊಸಪ್ರೆಸಿವ್ ಥೆರಪಿ ಮತ್ತು ನಂತರ ದಾನಿ ಪೋಷಕರೊಂದಿಗೆ ಅಸ್ಥಿ ಮಜ್ಜೆ ಕಸಿಯ ಅಗತ್ಯವಿದೆ.
ಆಕೆಯ ತಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆ 6 ತಿಂಗಳ ಮಗುವಾಗಿದ್ದಾಗಿನಿಂದಲೂ ಆಕೆಗೆ ರಕ್ತ ವರ್ಗಾವಣೆ ನಡೆಯುತ್ತಿದ್ದು, ಇದಕ್ಕಾಗಿ ಪೋಷಕರು ಹಲವಾರು ರೂಪಾಯಿ ವೆಚ್ಚ ಮಾಡಿದ್ದು ಇದೀಗ ಅಸ್ಥಿ ಮಜೆ ಕಸಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ.
ಕುಟುಂಬವು ‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು’ ಇವರಲ್ಲಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದು,ಕುಟುಂಬವನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಟ್ರಸ್ಟ್ ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದೆ.
ಪುಟಾಣಿ ಅದ್ರಿಕಾಗೆ ಸಹಾಯ ಮಾಡಲು ಬಯಸುವವರು ಈ ಕೆಳಗಿನ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
SAVE LIFE CHARITABLE TRUST
A/c No: 50200020195799
IFSC CODE: HDFC0003316












