ಉಡುಪಿಯ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿಯ ಶಾಸಕರನ್ನು ಅವನ್ಯಾರು ಏಂದು ಹೇಳಿರುವುದು ಶಾಸಕಾಂಗಕ್ಕೆ ಮಾಡಿದ ಅವಮಾನವೆಂದು ಉಡುಪಿ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರಿಂದ ಆಯ್ಕೆಯಾದ ಶಾಸಕರನ್ನು ಈ ರೀತಿಯಾಗಿ ಅವಮಾನಿಸಿರುವುದು ಉಡುಪಿಯ ಮತದಾರರಿಗೆ ಮಾಡಿದ ಅವಮಾನ, ಹಾಗೂ ತಾವು ಕಳೆದ 5 ವರ್ಷದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಶಾಸಕರ ಪರಿಚಯ ಇಲ್ಲದಿರುವುದು ನಿಮ್ಮ ಮತೀಯ ಓಲೈಕೆಯ ಸುಳಿವು ಏಂಬುದು ನಗ್ನ ಸತ್ಯ. ಹಿಜಾಬ್ ವಿಷಯದಲ್ಲಿ ನಿಮಗೆ ಸಹಾನುಭೂತಿ ಇದ್ದರೆ ನಿಮ್ಮ ಮಕ್ಕಳಿಗೂ ಹಿಜಾಬ್ ಹಾಕಿ, ಅದರ ಹೊರತು ಏನೂ ತಿಳಿಯದ ಮುಗ್ಧ ವಿಧ್ಯಾರ್ಥಿನಿಗಳ ಶೈಕ್ಷಣಿಕ ಜೀವನದಲ್ಲಿ ಚೆಲ್ಲಾಟವಾಡದಿರಿ. ಮತ್ತು ನಿಮಗೆ ಉಡುಪಿ ಶಾಸಕರ ಪರಿಚಯವಿಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ನೀವು ಗೆಲುವನ್ನು ಸಾಧಿಸಿ ತೋರಿಸಿ ಏಂದು ರಾಮ್ ಸೇನಾ ಉಡುಪಿ ಜಿಲ್ಲಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ಸವಾಲು ಹಾಕಿದ್ದಾರೆ.