ಮಣಿಪಾಲ: ಗಾಂಧಿಯನ್ ಸೆಂಟರ್ ಫಾರ್ ಫಿಲಾಸೊಫಿಕಲ್ ಆರ್ಟ್ ಎಂಡ್ ಸೈನ್ಸ್ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ “ಸರಸ್ವತಿ ನದಿಯ ಪಥವನ್ನು ಪತ್ತೆ ಹಚ್ಚುವುದು, ನೀರು ಮತ್ತು ಪರಿಸರ” ಕುರಿತು ಹಿರಿಯ ಸಾಮಾಜಿಕ ಕಾರ್ಯಕರ್ತ ಜಗದೀಶ್ ಗಾಂಧಿ ಅವರಿಂದ ಉಪನ್ಯಾಸ ಕಾರ್ಯಕ್ರಮವು ಮಾ.9 ರಂದು ಮಧ್ಯಾಹ್ನ 2.45 ಗಂಟೆಗೆ ಮಾಹೆಯ ಪ್ಲಾನೆಟೋರಿಯಂ ಆಡಿಟೋರಿಯಂನಲ್ಲಿ ನಡೆಯಲಿರುವುದು. ಮುಖ್ಯ ಅತಿಥಿಗಳಾಗಿ ನಾಮನಿರ್ದೇಶಿತ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊ.ದೇವಾನಂದ್ ಸಿಎ ಹಾಗೂ ಮಾಹೆ ಆನ್ ಲೈನ್ ಎಡ್ಜುಕೇಶನ್ ಡೈರೆಕ್ಟರ್ ಡಾ. ಮನೋಜ್ ನಾಗಸಂಪಿಗೆ ಭಾಗವಹಿಸಲಿದ್ದಾರೆ ಎಂದು ರಾಮಚಂದ್ರ ಕಾಮತ್ ಕೊಡಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.