ಹರ್ಲೆ‌ ಡೇವಿಡ್ಸನ್ ಎಕ್ಸ್ 440 ಮೋಟಾರ್ ಬೈಕ್ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮ

ಉಡುಪಿ : ಹಿರೋ ಶಕ್ತಿ ಮೋಟಾರ್ಸ್ ,ಹರ್ಲೆ ಡೇವಿಡ್ಸನ್ ವತಿಯಿಂದ ವಿನೂತನ ಮಾದರಿಯ ಹರ್ಲೆ‌ ಡೇವಿಡ್ಸನ್ ಎಕ್ಸ್ 440 ಮೋಟಾರ್ ಬೈಕ್ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸೂಟ್ಸ್ ಹೋಟೆಲ್ ನಲ್ಲಿ ನಡೆಯಿತು. ಹಿರೋ ಶಕ್ತಿ ಮೋಟಾರ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ವಿಜಯ್ ಕರ್ಣೆ, ರಾಹುಲ್ ಮತ್ತು ಕಂಪನಿಯ ಪ್ರಶಾಂತ್ ಡಿಕೆ ನೂತನ ಮೊಟಾರ್ ಬೈಕ್ ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 7 ಮಂದಿ ಗ್ರಾಹಕರಿಗೆ ಬೈಕ್ ಗಳನ್ನು ಅತಿಥಿಗಳು ಹಸ್ತಾಂತರಿಸಿದರು. ಹಾರ್ಲೆ-ಡೇವಿಡ್ಸನ್ […]

ಇಂದ್ರಾಳಿ ನೂರಾನಿ ಮಸೀದಿ ನವೀಕೃತ ಮುಖ್ಯ ದ್ವಾರ ಉದ್ಘಾಟನೆ

ಉಡುಪಿ: ನೂರಾನಿ ಮಸೀದಿ ಇಂದ್ರಾಳಿ ಇದರ ನವೀಕೃತಗೊಂಡ ಆವರಣದ ವಿದ್ಯುತ್ ದೀಪಗಳನ್ನು ಜನಾಬ್ ರಿಝವಾನ್ ಹಾಗೂ ಮಸೀದಿಯ ಆವರಣದ ಮುಖ್ಯ ದ್ವಾರವನ್ನು ಅಲ್ ಹಾಜ್ ಶೇಕ್ ವಹೀದ್ ದಾವೂದ್ ಉದ್ಘಾಟಿಸಿದರು. ಮಸೀದಿಯ ಆವರಣದ ಎರಡನೇ ದ್ವಾರದ ಉದ್ಘಾಟನೆಯನ್ನು ಅಲ್ ಹಾಜ್ ಎಸ್ ಎಂ ಜಾಫರ್, ಮಸೀದಿಯ ಆವರಣದ ಮೂರನೇ ದ್ವಾರದ ಉದ್ಘಾಟನೆಯನ್ನು ಅಲ್ ಹಾಜ್ ಅಬ್ದುಲ್ ಗಫೂರ್ ಪನಿಯಾಡಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾನಿ ಮಸೀದಿಯ ಇಮಾಮ್ ಮೌಲಾನ ಮಸಿ ಉಲ್ಲಾಖಾನ್, ಮಸೀದಿಯ ಅಧ್ಯಕ್ಷ ಜನಾಬ್ […]

72 ವರ್ಷದ ಓಟಗಾರ್ತಿ ಅರುಣ ಕಲಾ ಎಸ್ ರಾವ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ: ಅರುಣಕಲಾ ಎಸ್ ರಾವ್ ಅವರು ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ ಪುಣೆ ಮಹಾರಾಷ್ಟ್ರದಲ್ಲಿ ಚಲಪತಿ ಶಿವಾಜಿ ಸ್ಟೇಡಿಯಂನಲ್ಲಿ ನಡೆದಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ5000 ಮೀಟರ್ ಓಟದಲ್ಲಿ ಚಿನ್ನ, 1500 ಮೀಟರ್ ,800 ಮೀಟರ್ ಓಟದಲ್ಲಿ ಬೆಳ್ಳಿ, 4×100 ರಿಲೇ 4×400 ರಿಲೆಯಲ್ಲಿ ಬೆಳ್ಳಿ ಪದಕ ಹೀಗೆ 1 ಚಿನ್ನ 4 ಬೆಳ್ಳಿ ಪದಕ ಪಡೆದು ಸ್ವಿಜರ್ಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದ ಮಣಿಪಾಲನ್ ಮ್ಯಾರಥನ್ ನಲ್ಲಿ 21 ಕಿಲೋಮೀಟರ್ ಮಹಿಳಾ […]

ಭಾರತ v/s ಇಂಗ್ಲೆಂಡ್ ಟೆಸ್ಟ್: 4-1 ಅಂತರದಿಂದ ಸರಣಿ ಗೆದ್ದ ಭಾರತ

ಧರ್ಮಶಾಲಾ: ಸ್ಪಿನ್ನರ್‌ಗಳ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್‌ ಪಂದ್ಯವನ್ನು(Test Match) ಭಾರತ (Team India) ಒಂದು ಇನ್ನಿಂಗ್ಸ್‌ ಮತ್ತು 64 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. 259 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 195 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಪಿನ್ನರ್‌ ಅಶ್ವಿನ್‌ 5 ವಿಕೆಟ್‌ ಪಡೆದರೆ ಬುಮ್ರಾ ಮತ್ತು ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಪಡೆದರು. ರವೀಂದ್ರ ಜಡೇಜಾ 1 […]

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಹೊಸ ಚಿತ್ರ ಬಿಡುಗಡೆ: ಪತ್ತೆ ಹಚ್ಚಲು ನಾಗರಿಕರ ಸಹಕಾರ ಕೋರಿದ ತನಿಖಾ ಸಂಸ್ಥೆ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwarma Cafe Blast) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಅಪರಾಧಕ್ಕೆ ಸಂಬಂಧಿಸಿದ ಶಂಕಿತನ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದೆ ಮತ್ತು ಆತನನ್ನು ಪತ್ತೆಹಚ್ಚಲು ಸಾರ್ವಜನಿಕ ಸಹಕಾರವನ್ನು ಕೋರಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ. “ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಶಂಕಿತನನ್ನು ಗುರುತಿಸಲುೀನ್.ಐ.ಎ ನಾಗರಿಕರ ಸಹಕಾರವನ್ನು ಕೋರಿದೆ. ಯಾವುದೇ ಮಾಹಿತಿಯೊಂದಿಗೆ 08029510900, 8904241100 ಕರೆ ಮಾಡಿ ಅಥವಾinfo.blr.nia@gov.in ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಇಡಲಾಗುವುದು” […]