ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಉಪನ್ಯಾಸ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವು
ಅಂತರಾಷ್ಟ್ರೀಯ ಮಹಿಳಾದಿನದ ಅಂಗವಾಗಿ “ಆರೋಗ್ಯ ಮತ್ತು ಯೋಗಕ್ಷೇಮದ” ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿತ್ತು.

ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು
ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ ಕೆ.ವಿ. ಭಾಗವಹಿಸಿದ್ದರು. ಡಾ.ಮಮತಾ ಇವರು ಮಾತನಾಡಿ ಮಹಿಳೆಯರಲ್ಲಿ ಕಂಡುಬರುವ ಅಂಡಾಶಯದ ಸಮಸ್ಯೆಗಳು, ಮಹಿಳೆಯರಿಗೆ ಹೆಚ್ಚುತ್ತಿರುವ ಜವಾಬ್ದಾರಿಗಳು ಮತ್ತು ಬದಲಾಗುತ್ತಿರುವ ಜೀವನ ಶೈಲಿಯು ದೇಹದ ನೈಸರ್ಗಿಕ ಲಯವನ್ನು ಹೇಗೆ ತೊಂದರೆಗೊಳಿಸುತ್ತದೆ ಎಂದು ತಿಳಿಸಿದರು.

ಇವರು ನಿಜ ಜೀವನದ ಉದಾಹರಣೆ ನೀಡುವ ಮೂಲಕ ಜೀವನ ಶೈಲಿಯ ಅಸ್ವಸ್ಥತೆಗಳು, ಔಷಧಿಗಳ ಅಜಾಗರೂಕ ಬಳಕೆಯಿಂದಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿಸಿದರು. ಟಾಕ್ಸಿನ್ +ಒತ್ತಡ = ರೋಗ ಎಂಬ ವಿಷಯದ ಬಗ್ಗೆ ತಿಳಿಸಿದರು.

ನೈಸರ್ಗಿಕ ಮತ್ತು ಆರೋಗ್ಯಕರ ಜೀವನದ ಮೂಲಕ ಯುವ ಪೀಳಿಗೆಯ ಆರೋಗ್ಯವನ್ನು ಪೋಷಿಸುವುದು, ಆಮೂಲಕ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು ಎಂಬುದರ ಕುರಿತು ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ‌ಕಾರ್ಯನಿರ್ವಹಣಾಧಿಕಾರಿಯಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ನಾಗರಾಜ್ ಭಟ್ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ. ದೀಪಿಕಾ ಬಿ. ವಿ. ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಮಹಿಳಾ ಸಬಲೀಕರಣ ಘಟಕದ ಸಂಯೋಜಕಿಯಾದ ಮೇಘರಾಣಿ ಇವರು ಸಂಯೋಜಿಸಿದರು.