ಉಡುಪಿ: ಉಡುಪಿ ನ್ಯಾಯಾಲಯದಲ್ಲಿ ನ್ಯಾಯವಾದಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸುತ್ತಾ 16 ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ, ಸಮಾಜ ಸೇವೆ ಮಾಡುತ್ತಿರುವ ನ್ಯಾಯವಾದಿ ಗಿರೀಶ್ ಐತಾಳ್ ಅವರಿಗೆ ಬೆಂಗಳೂರಿನ ಕರ್ನಾಟಕ ಭವನದ ನಯನ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ‘ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ’ ಪ್ರದಾನ ನಡೆಯಿತು.
ಸಂಸ್ಥಾಪಕ ಅಧ್ಯಕ್ಷ ರಮೇಶ್ ಸುರ್ವೆ, ಚೆನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರು ಬಸವ ಸ್ವಾಮೀಜಿ, ಚಲನಚಿತ್ರ ನಟರಾದ ಬ್ಯಾಂಕ್ ಜನಾರ್ದನ್, ವೀಣಾ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಳೆದೆರಡು ವರ್ಷಗಳಲ್ಲಿ ಜಾತ್ಯತೀತ ಸಿದ್ಧಾಂತ ಗಟ್ಟಿಪಡಿಸಲು ಅಂತರ್ಜಾತಿ, ಹಿಂದೂ ಧರ್ಮ ವಿವಾಹಕ್ಕೆ ಸಹಕಾರ ನೀಡಿದ್ದಲ್ಲದೆ, ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಈ ವರೆಗೆ 137 ಜೋಡಿಗಳ ವಿವಾಹ ಪಡು ಬೈಲೂರಿನ ಶ್ರೀ ಇಷ್ಟ ಮಹಾಲಿಂಗೇಶ್ವರ ದೇಗುಲದಲ್ಲಿ ಮಾಡಿಸಿದ್ದರು. ಇದುವರೆಗೆ ಸುಮಾರು 183 ಗೃಹ ನಿರ್ಮಾಣ ಸಾಲವನ್ನು ತಮ್ಮ ಸಂಸ್ಥೆಯಲ್ಲಿಯೇ ಮಾಡಿದ್ದರು. ಇವರ ಈ ಸಾಧನೆ ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ.