ಬೆಂಗಳೂರು: ‘ಲವ್ ಜಿಹಾದ್’ ಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ರಾಜ್ಯದಲ್ಲೂ ಶೀಘ್ರವೇ ಪ್ರಬಲವಾದ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮದುವೆಗಾಗಿ ನಡೆಯುವ ಮತಾಂತರ ತಡೆಯಲು ಪ್ರಬಲ ಕಾನೂನಿನ ಅಗತ್ಯವಿದೆ. ಜಿಹಾದಿ ಶಕ್ತಿಗಳು ನಮ್ಮ ಸಹೋದರಿಯರ ಘನತೆ, ಗೌರವ ಹರಣ ಮಾಡುವುದನ್ನು ಸುಮ್ಮನೆ ನೋಡುತ್ತಾ ಕೂರಲು ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಯಾರೇ ಇರಲಿ ಮತಾಂತರದಂತಹ ಕೃತ್ಯದಲ್ಲಿ ತೊಡಗಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.