ಕೊಡಂಗೆ ಶ್ರೀರಾಮ ಭಜನಾ ಮಂದಿರದ ಸ್ಥಾಪಕ ಲಕ್ಷ್ಮಣ ಕಾಮತ್ ನಿಧನ

ಮಣಿಪಾಲ: ಕೊಡಂಗೆ ಶ್ರೀರಾಮ ಭಜನಾ ಮಂದಿರದ ಸ್ಥಾಪಕ ಕೊಡಂಗೆ ಲಕ್ಷ್ಮಣ ಕಾಮತ್ (92) ಅವರು ಸ್ವಗೃಹದಲ್ಲಿ ಶುಕ್ರವಾರ ನಿಧನ ಹೊಂದಿದರು.

ಆರ್.ಎಸ್.ಬಿ ಸಮಾಜದ ಹಿರಿಯರಾದ ಇವರು ಹೆರ್ಗಾ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಕೊಡಂಗೆ ಶ್ರೀರಾಮ ಮಂದಿರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.