ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತದ ಜನಪ್ರತಿನಿಧಿಗಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ತ್ರೋ ಬಾಲ್ ಪಂದ್ಯದಲ್ಲಿ ಸತತ ಮೂರನೇ ಬಾರಿಗೆ ಪ್ರಥಮ ಪ್ರಶಸ್ತಿ ಗೆದ್ದುಕೊಂಡ ಕುರ್ಕಾಲು ಗ್ರಾಮ ಪಂಚಾಯತ್ ಮಹಿಳಾ ತಂಡಕ್ಕೆ ಅಭಿನಂದನ ಕಾರ್ಯಕ್ರಮ ಮಂಗಳವಾರ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಸಂತೋಷ್ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕುರ್ಕಾಲು ಗ್ರಾಮ ಪಂಚಾಯತ್ ಸದಸ್ಯ ದಿನಕರ ಶೆಟ್ಟಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸತತ ಮೂರು ಬಾರಿ ಹೊಳಪು ಪ್ರಶಸ್ತಿ ನಮ್ಮ ಗ್ರಾಮ ಪಂಚಾಯತ್ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಮುಂದಿನ ೨೦೧೯ ಹೊಳಪು ಪ್ರಶಸ್ತಿ ಮತ್ತೆ ನಮ್ಮದಾಗಬೇಕು. ಹೀಗಾಗಿ ಮುಂದಿನ ಜನವರಿಯಿಂದಲೇ ನಿರಂತರ ಕ್ರೀಡಾ ತಯಾರಿಯನ್ನು ಸದಸ್ಯರು ಮಾಡಬೇಕು. ಕುರ್ಕಾಲು ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ಪಂಚಾಯತ್ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಪೂಜಾರಿ ವಹಿಸಿದ್ದರು . ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಚಂದ್ರಕಲಾ , ಕಾರ್ಯದರ್ಶಿ ಗಾಯತ್ರಿ, ಪಂಚಾಯತ್ ಸದಸ್ಯರುಗಳಾದ ಭುವನೇಶ್ ಎಲ್ ಪೂಜಾರಿ, ಮಹೇಶ್ ಶೆಟ್ಟಿ, ಲಕ್ಷ್ಮಣ ಮೂಲ್ಯ, ವಿನ್ಸೆಂಟ್ ರೋಡ್ರಿಗಸ್, ಸುದರ್ಶನ್ ರಾವ್, ಉಪಾಧ್ಯಕ್ಷೆ ಸುದಕ್ಷಿಣಿ, ಪ್ರಮಿಳಾ ಸೋನ್ಸ್ , ನತಾಲಿಯಾ ಮಾರ್ಟಿಸ್ , ಪ್ರಮೀಳಾ ಆಚಾರ್ಯ , ಸುನಂದಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಎಂ ಜಿ ನಾಗೇಂದ್ರ ನಿರೂಪಿಸಿದರು.
ReplyForward
|