ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣಕ್ಕೆ ಕುಂದಾಪುರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆಯಾದ ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್ (29) ಎನ್ನುವಾಕೆ ತನ್ನ ಪತಿ ಹಾಗೂ ಆತನ ಕುಟುಂಬಿಕರ ವಿರುದ್ದ ದೂರು ನೀಡಿದ್ದಾರೆ.
ಹಿರಿಯಡ್ಕ ನಿವಾಸಿಗಳಾದ ಸಂತ್ರಸ್ತೆ ಪತಿ ಹನೀಫ್ ಸಯ್ಯದ್(32), ಮಾವ ಅಬ್ಬಾಸ್ ಸಯ್ಯದ್, ಅತ್ತೆ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ ವಿರುದ್ಧ ದೂರು ನೀಡಿದ್ದಾರೆ.
ಹನೀಫ್ ಜತೆ ಈ ವರ್ಷದ ಜು. 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾಗಿದ್ದು, ಆಗ 5ಲಕ್ಷರೂ ಕೇಳಿದ್ದರೂ, 2ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು. ಇದೇ ಕಾರಣ ನೀಡಿ ನಿತ್ಯ ಕಿರುಕುಳ ಪತಿ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿರುವುದಾಗಿ ಅಲ್ಫಿಯಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಥಮ ಪ್ರಕರಣ!
ಸಂತ್ರಸ್ತ ಮಹಿಳೆ ಕುಟುಂಬಿಕರ ಜೊತೆ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಬಳಿ ಬರುತ್ತಾರೆ. ನ್ಯಾಯವಾದಿಗಳ ಬಳಿ ಸಮಸ್ಯೆ ಹೇಳಿಕೊಂಡಿದ್ದು ಅವರು ನೀಡಿದ ಕಾನೂನು ಸಲಹೆಯಂತೆ ದೂರು ನೀಡುತ್ತಾರೆ.