ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ತೆರೆದಿದೆ ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿ

ಕುಂದಾಪುರ: ಇಲ್ಲಿನ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಬಿಲ್ಡಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ( ಸ್ಪೇಸ್) ಸಂಸ್ಥೆಯ ವೃತ್ತಿಪರ ಕೋರ್ಸುಗಳನ್ನು ಮಾಡಲು ಇಚ್ಚಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

2019-20ನೇ ಸಾಲಿನ ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಗತಿ ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್ ಹಾಗೂ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದೆ. ಸಂಸ್ಥೆಯ ತರಬೇತಿದಾರರಿಂದ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಮತ್ತು ಸಿಎ-ಐಪಿಸಿಸಿ ಉತ್ತೀರ್ಣರಾಗಿರುತ್ತಾರೆ.

ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಈ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ವೈಷ್ಣವಿ ಅವರು 21ನೇ ಹಾಗೂ 27ನೇ ರ್ಯಾಂಕ್ ಗಳಿಸಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಸಿಂಚನಾ- 272, ಅಂಕಿತಾ – 265, ಸುಚಿನ್- 268, ಸಂಪ್ರೀತಾ- 238, ಐಶ್ವರ್ಯ-225, ಕೇದಾರ್ ಭಟ್- 250, ಸುದರ್ಶನ್-252, ಅಭಿಷೇಕ್-243, ಐಷಾ ತುಬಾ-246, ಹರ್ಷ-228, ಅಜೇಟನ್-228, ಅಖಿಲಾ-232, ಮೇಘನಾ-228, ಶರಣು-235, ಪಲ್ಲವಿ-217, ಭೂಮಿಕಾ-217, ಅಮೃತಾ-207, ಕೆ.ಆರ್. ದೀಕ್ಷಾ-200, ಪ್ರಣೀತಾ-200, ಶ್ರೀನಿಧಿ ಆಚಾರ್- 219ನೇ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿಶೇಷ ತರಬೇತಿಗಿಲ್ಲಿ ಅವಕಾಶ:
ಸಂಸ್ಥೆಯಲ್ಲಿ ಉತ್ತಮ ಬೋಧಕ ಸಿಬ್ಬಂದಿಗಳಿದ್ದು, ದೇಶದ ನಾನಾ ಭಾಗಗಳಿಂದ ಪರಿಣಿತ ಲೆಕ್ಕಪರಿಶೋಧಕರು ಮತ್ತು ಬೋಧಕ ಸಿಬ್ಬಂದಿ ಆಗಮಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಹೆಚ್ಚಿಸಿದೆ.

ಸಿಎ, ಸಿಎಸ್, ಸಿಎಂಎ ತರಬೇತಿ ಜತೆಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ವೃತ್ತಿ ಮಾರ್ಗದರ್ಶನದ ಕುರಿತು ಉಚಿತ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಬಿಕಾಂ, ಬಿಬಿಎಂ, ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚುಗಳಿದ್ದು, ಬೆಳಿಗ್ಗೆ ಸಿಎ, ಸಿಎಸ್, ಸಿಎಂಎ ತರಬೇತಿಗೆ ಕುಳಿತು ಮಧ್ಯಾಹ್ನ ಬಿ.ಕಾಂ ತರಗತಿಗೆ ಹಾಜರಾಗುವ ವ್ಯವಸ್ಥೆ ಕೂಡ ಒಳಗೊಂಡಿದೆ.

ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ದ್ವಿತೀಯ ವರ್ಷದ ಬಿ.ಕಾಂ ನಲ್ಲಿರುವಾಗಲೇ ಸಿಎ-ಐಪಿಸಿಸಿ ತೇರ್ಪಡೆ ಹೊಂದಿದ್ದಾರೆ. ಸಂಜೆ ಕಾಲೇಜು ಮತ್ತು ದೂರದರ್ಶನದಲ್ಲಿ ಬಿಕಾಂ ಮಾಡಿ ಅದರ ಜೊತೆಗೆ ಸಿಎ, ಸಿಎಸ್ ಮಾಡಲು ಕೂಡ ಸಂಸ್ಥೆ ವ್ಯವಸ್ಥೆ ಕಲ್ಪಿಸಿಕೊಡುತ್ತಿದ್ದು, ಅಂತಹ ವಿದ್ಯಾರ್ಥಿಗಳಿಗಪ್ರತ್ಯೇಕ ಬ್ಯಾಚುಗಳು ಲಭ್ಯವಿರುತ್ತದೆ.

ಸರಕಾರದಿಂದ ಸಿಗುವ ಮತ್ತು ಇನ್ನಿತರ ಸಂಘ ಸಂಸ್ಥೆಗಳಿಂದ ಸಿಗುವ ಎಲ್ಲಾ ವಿದ್ಯಾರ್ಥಿ ವೇತನ ಪಡೆಯಲು ಸಂಸ್ಥೆ ಸೂಕ್ತ ಮಾರ್ಗದರ್ಶನ ಮಾಡುವುದರೊಂದಿಗೆ ‘ಪಾಂಡಿತ್ಯ ದರ್ಪಣ’ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯವನ್ನು ಸಂಸ್ಥೆ ನೀಡಲಿದೆ.

ಹೊಸ ಬ್ಯಾಚು ಶುರು:
ಸಂಸ್ಥೆಯಲ್ಲಿ ಸಿಎ/ಸಿಎಸ್ ಮತ್ತು ಇಂಟರ್ ಮೀಡಿಯೇಟ್ ಬ್ಯಾಚುಗಳು ಆರಂಭಗೊಳ್ಳಲಿದ್ದು, ನವೆಂಬರ್ ರಲ್ಲಿ ಸಿಎ/ ಸಿಎಸ್ ಫೌಂಡೇಶನ್ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಇದರ ಅನುಕೂಲವನ್ನು ಪಡೆದುಕೊಳ್ಳಬಹುದು. ಸಿಎ ಇಂಟರ್ಮೀಡಿಯೇಟ್ ಬ್ಯಾಚ್ ಜೂನ್ 25ರಿಂದ ಆರಂಭಗೊಳ್ಳಲಿದ್ದು, ಬಿಕಾಂ, ಬಿಬಿಎಂ, ಬಿಎಸ್ಸಿ ಮುಗಿದ ವಿದ್ಯಾರ್ಥಿಗಳು ಜೊತೆಗೆ ಅಂತಿಮ ವರ್ಷದ ಪದವಿಯಲ್ಲಿರುವ ವಿದ್ಯಾರ್ಥಿಗಳು ಕೂಡ ತರಗತಿಗೆ ನೊಂದಾಯಿಸಿಕೊಳ್ಳಬಹುದು.

ಕ್ಯಾಟ್/ ಮ್ಯಾಟ್/ ಪಿಜಿಸಿಇಟಿ/ ಐಬಿಪಿಎಸ್ ತರಗತಿಗಳಿಗೆ ಬ್ಯಾಚುಗಳು ಜೂನ್ 26 ರಿಂದ ಆರಂಭಗೊಳ್ಳಲಿದೆ. ತರಗತಿಯನ್ನು ಸೇರಲು ಇಚ್ಚಿಸುವ ಹಾಗೂ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿರುವ ವಿದ್ಯಾರ್ಥಿಗಳು ಸಂಪರ್ಕ ಸಂಖ್ಯೆ 9845925983, 9964291755 ಅವರನ್ನು ಸಂಪರ್ಕಿಸಬಹುದು ಅಥವಾ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ್ ಕ್ಲಿನಿಕ್ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.