ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಂಯೋಜಿತವಾಗಿರುವ ಕುಂದಾಪುರ ತಾಲೂಕಿನ ಏಕೈಕ ಪತ್ರಕರ್ತರ ಸಂಘಟನೆಯಾಗಿದೆ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ನಮ್ಮ ಸಂಘಟನೆಯ ಹೆಸರನ್ನೇ ಹೋಲುವ ಇನ್ನೊಂದು ಸಂಘಟನೆಯನ್ನು ಕಟ್ಟಿಕೊಂಡಿದ್ದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. “ಶಾಸ್ತ್ರಿ ಸರ್ಕಲ್ ಚಲೋ” ಎಂಬ ಕಾರ್ಯಕ್ರಮದಲ್ಲೂ ನಮ್ಮ ಸಂಘಟನೆಯ ಹೆಸರಿನ ದುರ್ಬಳಕೆಯಾಗುತ್ತಿದ್ದು ಈ ಕಾರ್ಯಕ್ರಮ ನಮ್ಮ ಸಂಘದ ಕಾರ್ಯಕ್ರಮವಲ್ಲ ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸ್ಪಷ್ಟೀಕರಿಸಿದೆ.
ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ ಮಾನ್ಯತೆ ಪಡೆದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜೊತೆಗೆ ಮಾಧ್ಯಮ ಸಂಬಂಧಿ ವಿಚಾರಗಳಿಗಾಗಿ ವ್ಯವಹರಿಸಬೇಕೆಂದೂ ಬೇರೆ ಯಾವುದೇ ಅನಧಿಕೃತ ಸಂಘಟನೆಗಳ ಜೊತೆ ನಡೆಸುವ ವ್ಯವಹಾರಕ್ಕೆ ನಮ್ಮ ಸಂಘಟನೆ ಯಾವುದೇ ರೀತಿಯಲ್ಲೂ ಉತ್ತರದಾಯಿಯಲ್ಲ ಎಂಬುದನ್ನು ಕುಂದಾಪುರ. ತಾ. ಕಾ. ನಿ. ಪತ್ರಕರ್ತರ ಸಂಘ ಸ್ಪಷ್ಟಪಡಿಸಿದೆ.