ಕುಂದಾಪುರ: ಬೋನಿಗೆ ಬಿತ್ತು ಚಿರತೆ, ನಿರಾಳರಾದ ಯಡ್ಯಾಡಿ ಮತ್ಯಾಡಿ ಗ್ರಾಮಸ್ಥರು

ಕುಂದಾಪುರ : ಯಡ್ಯಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ ಪರಿಸರದಲ್ಲಿ ಕಳೆದ ಹಲವಾರು ದಿನದಿಂದ ಪರಿಸರದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೀನಿನಲ್ಲಿ ಸೆರೆಯಾಗಿದೆ.

ಗುಡ್ಡಟ್ಟು ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಯಡ್ಯಾಡಿ ಮತ್ಯಾಡಿ ಪರಿಸರದಲ್ಲಿ ಚಿರತೆ ಉಪಟಳ ಹೆಚ್ಚಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ್ದೂ ಇದೆ. ಚಿರತೆ ಉಪಟಳ ಬಗ್ಗೆ ಪರಿಸರ ನಾಗರಿಕರು ಶಂಕರನಾರಾಯಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಳೆದ ತಿಂಗಳು ಚಂದ್ರಾವತಿ ಗುಡ್ಡೆಮನೆ ಎನ್ನುವರ ಜಾಗದಲ್ಲಿ ಬೋನು ಇಟ್ಟಿದ್ದರು. ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿ ಗುಡ್ಡಟ್ಟು ಬಳಿ ಇಲಾಖೆ ಅಧಿಖಾರಿಗಳು ಇಟ್ಟ ಬೋನಲ್ಲಿ ಚಿರತೆ ಸೆರೆಯಾಗಿದೆ.

ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಮೊಳಹಳ್ಳಿ ಶಾಖೆ ಉಪ ಸಂರಕ್ಷಣಾಧಿಕಾರಿ ಸಂತೋಷ್ ದೇವಾಡಿಗ, ಶಂಕರನಾರಾಯಣ ಉಪವಲಯ ಅಧಿಕಾರಿ ಹರೀಶ್ ಕೆ., ಅರಣ್ಯ ರಕ್ಷಕರಾದ ರವೀಂದ್ರ, ಗುರುರಾಜ್, ಅರಣ್ಯ ವೀಕ್ಷಕರಾದ ಶಿವು, ಲಕ್ಷ್ಮಣ ಕುಲಾಲ್ ಹಾಗೂ ಗ್ರಾಮಸ್ಥರು ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.