udupixpress
Home Trending ಕುಂದಾಪುರದ ಮಳೆಗೆ ಜನಸಂಚಾರ ಅಸ್ತವ್ಯಸ್ತ: ಅವೈಜ್ಞಾನಿಕ ಕಾಮಗಾರಿಗೆ ಜನತೆ ಹೈರಾಣ

ಕುಂದಾಪುರದ ಮಳೆಗೆ ಜನಸಂಚಾರ ಅಸ್ತವ್ಯಸ್ತ: ಅವೈಜ್ಞಾನಿಕ ಕಾಮಗಾರಿಗೆ ಜನತೆ ಹೈರಾಣ

ಕುಂದಾಪುರ: ಸೋಮವಾರ ಬೆಳಿಗ್ಗೆ ಸತತ ಒಂದು ಗಂಟೆಗೂ ಅಧಿಕ‌ ಕಾಲ ಸುರಿದ ಮಳೆಗೆ ನಗರದಲ್ಲಿ ಜನಸಂಚಾರ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗಿನಿಂದಲೂ‌ ಮೋಡ ಕವಿದ ವಾತಾವರಣವಿದ್ದು, ಹನ್ನೊಂದು‌ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ತಾಲೂಕಿನಾದ್ಯಂತ‌ ಬಿರುಸಿನ‌ ಮಳೆಯಾಗಿದ್ದು, ಬಿಸಿಲ‌ ಝಳದಿಂದ‌ ಬಸವಳಿದ ಜನರಿಗೆ ಮಳೆ ತಂಪು ನೀಡಿತು.
ಅವೈಜ್ಞಾನಿಕ ಕಾಮಗಾರಿಗೆ ಸವಾರರು ಹೈರಾಣ:
ಕಳೆದ ದಶಕಗಳಿಂದ‌ ಆಮೆಗತಿಯಲ್ಲಿ ಸಾಗುತ್ತಿದ್ದ ಕುಂದಾಪುರ ಫ್ಲೈಓವರ್ ಕಾಮಗಾರಿ ಅರೆಬರೆಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರುನಿಂತು‌ ಕೆಲಕಾಲ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಯಿತು.‌ ಫ್ಲೈಓವರ್ ಕೆಳಭಾಗದ ಸರ್ವೀಸ್ ರಸ್ತೆಯಲ್ಲಿ ನೀರು‌ ನಿಂತ ಪರಿಣಾಮ ಸವಾರರು ಹಾಗೂ ಸಾರ್ವಜನಿಕರಿಗೆ ಕೆಲಹೊತ್ತು ಅನಾನುಕೂಲ ಉಂಟಾಯಿತು.
error: Content is protected !!