ಕುಂದಾಪುರ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯುಧ ಪೂಜೆಯನ್ನ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು.
ಸಮವಸ್ತ್ರಧಾರಿ ಇಲಾಖೆಯ ಸಿಬ್ಬಂದಿಗಳು ಪೂಜೆಯ ಅಂಗವಾಗಿ ಅಪ್ಪಟ ಭಾರತೀಯ ಶೈಲಿಯ ಉಡುಗೆಯನ್ನ ತೊಟ್ಟು ಗಮನ ಸೆಳೆದರು.
ಠಾಣೆ ಸಿಬ್ಬಂದಿಗಳಲ್ಲಿ ಭಾವೈಕ್ಯತೆ ಮೂಡಿಸುವ ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವ ಕಲ್ಪನೆಯಲ್ಲಿ ಸಿಬ್ಬಂದಿಗಳು ಒಂದೇ ರೀತಿಯ ಸಮವಸ್ತ್ರ ಧರಿಸುವ ನಿರ್ಧಾರ ಮಾಡಿದ್ದರು.
ಠಾಣಾಧಿಕಾರಿ ಹರೀಶ್ ಆರ್ ನಾಯಕ ಸೇರಿದಂತೆ ಎಲ್ಲಾ 60 ಸಿಬ್ಬಂದಿಗಳು ಶುಭ್ರ ವಸ್ತ್ರಾಧಾರಿಗಳಾಗಿದ್ದರು.
ಎಎಸ್ ಪಿ ಹರಿರಾಂ ಶಂಕರ, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯ ಕೋರಿದರು.












