ಕುಂದಾಪುರ: ಹಳೆ ಬಸ್ ನಿಲ್ದಾಣ ಸಮೀಪದ ಎ.ಎಸ್. ಟ್ರೇಡ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿರುವ “ಉದಯ ಜುವೆಲ್ಲರ್ಸ್” ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಯೋಜನೆ ಹಾಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕಳೆದ 35 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಮೇಲೆ ವಿಶೇಷ ವಿನ್ಯಾಸ ಹಾಗೂ ಆಕರ್ಷಕ ಶೈಲಿಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ದೀಪಾವಳಿ ಪ್ರಯುಕ್ತ ನವೆಂಬರ್ 1 ರಿಂದ 3ರ ವರೆಗೆ ವಜ್ರಾಭರಣಗಳ ವಿಶೇಷ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.
ಅ. 29ರಿಂದ ನ. 6ರ ವರೆಗೆ ಚಿನ್ನಾಭರಣಗಳ ಖರೀದಿಯ ಮೇಲೆ ಪ್ರತಿ ಗ್ರಾಂಗೆ 125 ರೂ. ಪ್ರತಿ ಕ್ಯಾರೆಟ್ ವಜ್ರಾಭರಣದ ಖರೀದಿ ಮೇಲೆ ₹5000 ಕಡಿತ ಹಾಗೂ ಪ್ರತಿ 1 ಕೆ.ಜಿ. ಬೆಳ್ಳಿಯ ಆಭರಣದ ಖರೀದಿ ಮೇಲೆ 2000 ರೂ. ಕಡಿತದ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.
ಗ್ರಾಹಕರು ಇತ್ತೀಚಿನ ವಿನ್ಯಾಸಗಳ ಪ್ರಮಾಣಿತ ಚಿನ್ನದ ಆಭರಣಗಳಿಗಾಗಿ ತಮ್ಮ ಹಳೆಯ ಚಿನ್ನವನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ವಿವಿಧ ಬೆಲೆ ಶ್ರೇಣಿಗಳಲ್ಲಿ ಬರುವ ದೀಪಾವಳಿ ವಿಶೇಷ ಡೈಮಂಡ್ ಕಲೆಕ್ಷನ್ ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಪಡೆಯಬಹುದು.
ವಿಶಿಷ್ಟ ಸಂಗ್ರಹ:
ಸಂಪೂರ್ಣ ಹವಾನಿಯಂತ್ರಿತ ಸಂಸ್ಥೆಯು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಎಲ್ಲಾ ರೀತಿಯ ವಿಶೇಷ ವಿನ್ಯಾಸ ಹಾಗೂ ಆಕರ್ಷಕ ಶೈಲಿಯ ಚಿನ್ನಾಭರಣಗಳಾದ ಟೆಂಪಲ್ ಕಲೆಕ್ಷನ್, ಕೊಲ್ಕತ್ತಾ ಡಿಸೈನ್, ಜೈಪುರ ಡಿಸೈನ್, ಬಾಂಬೆ ಆ್ಯಂಟಿಕ್ ಡಿಸೈನ್ ಹಾಗೂ ದಕ್ಷಿಣ ಭಾರತೀಯ ಶೈಲಿಯ ಆ್ಯಂಟಿಕ್ ಡಿಸೈನ್ ಕಲೆಕ್ಷನ್, ವಿವಾಹ ಮತ್ತು ಇನ್ನಿತರ ಧಾರ್ಮಿಕ ಶುಭ ಸಮಾರಂಭಗಳಿಗೆ ಬೇಕಾಗುವ ಗ್ರಾಹಕರ ಬೇಡಿಕೆ ಮತ್ತು ಆಯ್ಕೆಗೆ ಅನುಗುಣವಾಗಿ ಅತಿ ಕಡಿಮೆ ತಯಾರಿಕಾ ವೆಚ್ಚದಲ್ಲಿ ಸೂಕ್ತ ಆಭರಣಗಳನ್ನು ತಯಾರಿಸಿ ಅಧಿಕೃತ ಪ್ರಮಾಣ ಪತ್ರ ಹಾಗೂ BIS 916 ಹಾಲ್ ಮಾರ್ಕ್ ನೊಂದಿಗೆ ಮತ್ತು ವಜ್ರದ ಆಭರಣಗಳನ್ನು EF ಕಲರ್, VVS ಗುಣಮಟ್ಟದ, IGI ಸರ್ಟಿಫಿಕೇಟ್ ನೊಂದಿಗೆ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ಪಾಲುದಾರರಾದ ಎಸ್. ಆರ್. ಉದಯಕುಮಾರ್ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.