ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯ ಕೌಂಟ್ -20 ಜಿಲ್ಲಾ ಕ್ಯಾಂಪ್ ಜನವರಿ 10ರಂದು ಕುಂದಾಪುರ ಮಾವಿನಕಟ್ಟೆ ಮಸೀದಿಯ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ
ಜನವರಿ 9 ರಂದು ಸಂಜೆ ಕುಂದಾಪುರ ಅಸ್ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ (ಖ.ಸಿ)ರವರ ಮಖಾಂ ಝಿಯಾರತ್ ನಡೆಯಲಿದೆ.
ಎಸ್ ವೈಎಸ್ ಬ್ರಾಂಚ್, ಸೆಂಟರ್ ಹಾಗೂ ಜಿಲ್ಲಾ ಸಮಿತಿಯ ಆಯ್ದ ಪ್ರತಿನಿಧಿಗಳ ಈ ಕ್ಯಾಂಪ್ ಅಂದು ಬೆಳಿಗ್ಗೆ ಗಂಟೆ 8ಕ್ಕೆ ರಿಜಿಸ್ಟ್ರೇಷನ್ ನಡೆಯಲಿದೆ.
ಬೆಳಿಗ್ಗೆ ಗಂಟೆ 9ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷರಾದ ಹಾಜಿ ಚೆರಿಯಬ್ಬ ಮಾವಿನಕಟ್ಟೆ ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ನಂತರ ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಎ. ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಮುನ್ನುಡಿ ಸಮಾರಂಭ ನಡೆಯಲಿದೆ.
ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸಮಿತಿಯ ಕೋಶಾಧಿಕಾರಿ ಬಿ.ಕೆ ಅಬೂಬಕ್ಕರ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಲಿರುವರು.
ಬಳಿಕ ಎಸ್ ವೈ ಎಸ್ ಕಾರ್ಯಕ್ಷೇತ್ರ, ಸುನ್ನೀ ಚಳವಳಿ, ಸಾಂಘಿಕ ಟ್ರೈನಿಂಗ್, ಯೋಜನೆ ಮಂಡನೆ , ಸಾಂಘಿಕ ಸಂವಾದ,ಅಖೀದ ಮುಂತಾದ ವಿವಿಧ ವಿಷಯಗಳಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್, ರಾಜ್ಯ ಉಪಾಧ್ಯಕ್ಷೆ ಜಿ ಎಮ್ ಮುಹಮ್ಮದ್ ಕಾಮಿಲ್ ಸಖಾಫಿ, ರಾಜ್ಯ ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೆಟ್ ಹಂಝತ್ ಹೆಜಮಾಡಿ, ಕ್ಯಾಂಪ್ ಕ್ಯಾಪ್ಟನ್ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮುಂತಾದ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸುವರು.
ಸಂಜೆ ಗಂಟೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಹಾಜಿ ಕೆ ಮೊಯ್ದಿನ್ ಗುಡ್ವಿಲ್ ವಹಿಸಲಿದ್ದಾರೆ. ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ಮತ್ತು ಆಶೀರ್ವಚನ ನೀಡುವರು.
ಕಾಪು ಉಸ್ತಾದ್ ಅಹ್ಮದ್ ಖಾಸಿಮಿ, ಜಿಲ್ಲಾ ಸಹಾಯಕ ಖಾಝಿ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು, ಜಿಲ್ಲಾ ಉಲಮಾ ಸಂಘಟನೆಯ ಅಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್, ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಬಿ.ಎಸ್.ಎಫ್.ರಫೀಕ್ ಗಂಗೊಳ್ಳಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು, ಎಸ್ ಜೆ ಎಮ್ ಅಧ್ಯಕ್ಷರಾದ ಅಬ್ದುರ್ರಝಾಕ್ ಖಾಸಿಮಿ ಎಸ್ ಎಮ್ ಎ ಅಧ್ಯಕ್ಷರಾದ ಮನ್ಸೂರ್ ಕೋಡಿ, ಎಸ್ ಡಿ ಐ ಅಧ್ಯಕ್ಷರಾದ ಸಯ್ಯದ್ ಫರೀದ್ ಉಡುಪಿ, ಪ್ರಮುಖರಾದ ಹಾಜಿ ತೌಫೀಕ್ ಅಬ್ದುಲ್ಲಾ ನಾವುಂದ, ಅಬ್ದುಲ್ ವಹೀದ್ ಉಡುಪಿ ಅಶ್ರಫ್ ಅಂಜದಿ,ಸುಬ್ಹಾನ್ ಅಹ್ಮದ್ ಹೊನ್ನಾಳ, ವೈ ಬಿ ಸಿ ಬಶೀರ್ ಅಲಿ ಮೂಳೂರು, ಅಡ್ವಕೆಟ್ ಇಲ್ಯಾಸ್ ನಾವುಂದ ಹಾಗೂ ಮತ್ತಿತರ ನಾಯಕರು ಆಗಮಿಸುವರು ಎಂದು ಕ್ಯಾಂಪ್ ಉಸ್ತುವಾರಿ ಅಬ್ದುಲ್ಲಾ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ