ಕುಂದಾಪುರ: ಸಮುದ್ರದಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಎಂಕೋಡಿ ಕಡಲ ತೀರದಲ್ಲಿ ಮಧ್ಯಾಹ್ನ ಸಂಭವಿಸಿದೆ.
ನಳಗುಂದ ತಾಲೂಕಿನ ಮಂಜು (38) ಮೃತ ದುರ್ದೈವಿ. ಪತ್ನಿ ಜೊತೆ ಮಂಜು ಬೀಚ್‌ಗೆ ತೆರಳಿದ್ದು, ಈ ವೇಳೆ ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಈಜಲು ಸಮುದ್ರಕ್ಕೆ ಇಳಿದಿದ್ದಾರೆ.
ಆಗ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ ಮಂಜು ನೀರಿನಲ್ಲಿ ಮುಳುಗಿದ್ದಾನೆ. ಆತನ ಜೊತೆಗಿದ್ದ ವ್ಯಕ್ತಿ ಮಂಜುವನ್ನು ರಕ್ಷಣೆಗೆ ಧಾವಿಸಿದ್ದು, ಆತ ಕೂಡ ಮುಳುಗಿದ್ದಾನೆ.
ಕೂಡಲೇ ಸ್ಥಳೀಯರಾದ ಹಸೈನಾರ್, ಝೈನ್, ನಾಗರಾಜ್ ಕೋಡಿ, ವೆಂಕಟೇಶ್ ಕೋಡಿ, ಸಲಾಂ ಎಂಬುವವರು ಇಬ್ಬರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಆದರೆ ಅಷ್ಟೊತ್ತಿಗೆ ಮಂಜು ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.