ಕುಂದಾಪುರ: ಕರಾವಳಿಯ ಪ್ರಸಿದ್ಧ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ನ ಸ್ಥಳಾಂತರಿತ ಮಳಿಗೆಯ ಉದ್ಘಾಟನೆ

ಕುಂದಾಪುರ: ಕಳೆದ 26 ವರ್ಷಗಳಿಂದ ಕ್ರೀಡಾ ಸಲಕರಣೆಗಳಿಗೆ ಹೆಸರುವಾಸಿಯಾಗಿರುವ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ಕುಂದಾಪುರ ಮಳಿಗೆ  ಶಾಸ್ತ್ರೀ ಸರ್ಕಲ್ ಬಳಿಯ ಜೇಸಿ ಕಾಂಪ್ಲೆಕ್ಸ್ ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಇಂದು ನಡೆಯಿತು.

ಸ್ಥಳಾಂತರಿತ ನೂತನ ಮಳಿಗೆಯನ್ನು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಉದ್ಘಾಟಿಸಿದರು. ಉಡುಪಿ ಜಿಲ್ಲಾ  ಕರ್ನಾಟಕ ಬ್ಯಾಂಕ್ ನ ಎಜಿಎಂ ಮಾಧವ ವಿ.ಪಿ., ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಮಾಜಿ ನಾಯಕ ಶ್ರೀಪಾದ್ ಉಪಾಧ್ಯಯ, ರಾಷ್ಟಮಟ್ಟದ ವಾಲಿಬಾಲ್ ತೀರ್ಪುಗಾರ ಜಾಯ್ ಜೆ. ಕಾರ್ವಾಲೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ನ ಮಾಲೀಕ ಸದಾನಂದ ನಾವಡ, ಮೈತ್ರಿ ಎಸ್. ನಾವಡ, ನಿತ್ಯಾನಂದ ನಾವಡ ಉಪಸ್ಥಿತರಿದ್ದರು.

ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್ ಸಾಗಿ ಬಂದ ಹಾದಿ: ಕುಂದಾಪುರದ ಗಾಂಧೀ ಪಾರ್ಕ್ ಎದುರಿನ ಶಂಕರ್ ಕಾಂಪ್ಲೆಕ್ಸ್ ನಲ್ಲಿ ಡಿಸೆಂಬರ್ 25 , 1995 ರಲ್ಲಿ ಆರಂಭಗೊಂಡ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ಕ್ರೀಡಾ ಉಪಕರಣಗಳ ಮಳಿಗೆ ಇಂದು ಕರಾವಳಿಯ ಪ್ರಸಿದ್ಧ ಸ್ಪೋರ್ಟ್ಸ್ ಶೋರೂಮ್ ಆಗಿ ರೂಪುಗೊಂಡಿದೆ. ಮಾರುಕಟ್ಟೆಯ ಕ್ರೀಡಾ ಸಲಕರಣೆಗಳ ವ್ಯವಹಾರವನ್ನು ವಿಸ್ತರಿಸಿ ಗ್ರಾಹಕರ ವಿಶ್ವಾಸಗಳಿಸಿ ಭಟ್ಕಳ, ಮಣಿಪಾಲ, ಉಡುಪಿ, ಮಂಗಳೂರು, ಮೂಡಬಿದ್ರೆಯಲ್ಲೂ ಮಳಿಗೆಗಳನ್ನು ಸ್ಥಾಪಿಸಿ ಯಶಸ್ಸು ಗಳಿಸಿದೆ.

ಪ್ರಸ್ತುತ ಕೊರೊನಾ ಸಂಕಷ್ಟ/ ಸವಾಲುಗಳ ಕಾಲದಲ್ಲಿ ಎಲ್ಲಾ ವ್ಯವಹಾರ ನೆಲ ಕಚ್ಚುತ್ತಿರುವ ಸಂಧರ್ಭ ಹಾಗೂ ಆನ್ ಲೈನ್ ಮಾರ್ಕೆಟಿಂಗ್ ನಿಂದ ಕುಂದಾಪುರ/ ಉಡುಪಿ/ಮಣಿಪಾಲ ಈ ಮೂರು ಮಳಿಗೆಗಳೊಂದಿಗೆ ಮಾತ್ರ ವ್ಯವಹಾರ ಮುಂದುವರೆಸಲಾಗಿದೆ. ಹಾಗೆಯೇ ಸ್ವಂತ ಮೊಬೈಲ್ ಆ್ಯಪ್ ಹೊಂದಿರುವ ರಾಜ್ಯದ ಏಕೈಕ ಮಳಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್. ವಡೇರ ಹೋಬಳಿ ಗಾಂಧೀ ಪಾರ್ಕ್ ಎದುರು ಶಂಕರ್ ಕಾಂಪ್ಲೆಕ್ಸ್ ನಿಂದ ಹಲವು ವರ್ಷಗಳ ಹಿಂದೆ ಕುಂದಾಪುರದ ಜನನಿಬಿಡ  ಶಾಸ್ತ್ರೀ ಸರ್ಕಲ್ ಪರಿಸರದ ಯಡ್ತರೆ ಮಂಜಯ್ಯ ಶೆಟ್ಟಿ ಮುಖ್ಯ ರಸ್ತೆಯ ಹೆಗ್ಡೆ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿ ಉತ್ತಮ ಸೇವೆ ನೀಡುತ್ತಾ ಬಂದಿದೆ.

ಪ್ರಸ್ತುತ ಶಾಸ್ತ್ರೀ ಸರ್ಕಲಿನಿಂದ ಜೆ.ಎಲ್.ಬಿ ರಸ್ತೆಯ ಕೂಗಳತೆ ದೂರದ ತಮ್ಮದೇ ಸ್ವಂತ ಮಾಲೀಕತ್ವದ ಗ್ರೌಂಡ್ ಫ್ಲೋರ್ ಅಂಗಡಿ ಕೋಣೆಗಳಿಗೆ ಕುಂದಾಪುರದ ಶಾಖಾ ಮಳಿಗೆಯನ್ನು ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಳಿಗೆ ಗ್ರಾಹಕರಿಗೆ ಇನ್ನಷ್ಟು ವಿಶಾಲ  ಪಾರ್ಕಿಂಗ್, ಗ್ರೌಂಡ್ ಫ್ಲೋರ್ ನ ಆರಾಮ ಅನುಕೂಲತೆ , ಅನುಭವೀ ಸಿಬ್ಬಂದಿಯ ಸೇವೆ ಲಭ್ಯವಿದೆ.