ಕುಂದಾಪುರ: ಯುವತಿ ಪ್ರೀತಿ ತಿರಸ್ಕೃರಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಮನನೊಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ವಂಡ್ಸೆ ಗ್ರಾಮದ ರಿಜ್ವಾನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸುಮಾರು 3 ವರ್ಷಗಳಿಂದ ಗಂಗೊಳ್ಳಿಯ ಉಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆದರೆ, ಇತ್ತೀಚಿಗೆ ಯುವತಿ ಪ್ರೀತಿ ತಿರಸ್ಕರಿಸಿದ್ದು, ಇದರಿಂದ ರಿಜ್ವಾನ್ ಮಾನಸಿಕವಾಗಿ ಕುಗ್ಗಿಹೋಗಿದ್ದನು. ಎಂದು ತಿಳಿದುಬಂದಿದೆ. ಇದೇ ವಿಚಾರದಲ್ಲಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆ ಬಳಿಕ ಮನೆಯವರು , ಆತ ಕೆಲಸ ಮಾಡುವ ಮಾಲೀಕರು ಸಮಾಧಾನಪಡಿಸಿದ್ದರು.
ಬಳಿಕ ಮಾಲೀಕ ಗುಲ್ವಾಡಿಯ ಇರ್ಫಾನ್ ಅವರು ರಿಜ್ವಾನ್ ಗೆ ಬುದ್ದಿವಾದ ಹೇಳಿ, ಗುಲ್ವಾಡಿಯ ಬಾಡಿಗೆ ಮನೆಯಲ್ಲಿ ಇನ್ನೋರ್ವ ಕೆಲಸಗಾರ ಬುಡಾನ್ ಸಾಬ್ ರೊಂದಿಗೆ ಮಲಗುವಂತೆ ತಿಳಿಸಿದ್ದಾರೆ. ಆದರೆ, ರಿಜ್ವಾನ್ ಇಂದು ಬೆಳ್ಳಿಗ್ಗೆ ಬಾಡಿಗೆ ರೂಮ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.