ಕುಂದಾಪುರ: ತಾಲ್ಲೂಕಿನ ಮೂಡ್ಲುಕಟ್ಟೆಯ ಹಿನ್ನೀರಿನ ಕಾಂಡ್ಲಾವನದಲ್ಲಿ ಅಪರೂಪದ ಪ್ರಬೇಧಕ್ಕೆ ಸೇರಿದ ನೀರು ನಾಯಿಗಳು ಕಾಣಿಸಿಕೊಂಡಿವೆ.
ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮಥಾಯಿಸ್ ಡೆಸಾ ಅವರಿಗೆ ಈ ನೀರು ನಾಯಿಗಳು ಕಾಣಸಿಕ್ಕಿವೆ. ಇವು ಬಹಳಷ್ಟು ಅಂಜಿಕೆ ಸ್ವಭಾವ ಹೊಂದಿದ್ದು, ಮನುಷ್ಯರನ್ನು ನೋಡಿದ ಕೂಡಲೇ ನೀರಿನಲ್ಲಿ ಮುಳುಗಿ ಮರೆಯಾಗುತ್ತವೆ.
ಈ ಹಿಂದೆ ಪಶ್ಚಿಮಘಟ್ಟದ ನದಿಗಳು ಹಾಗೂ ಸಮುದ್ರದ ಹಿನ್ನೀರಿನಲ್ಲಿ ನೀರುನಾಯಿಗಳು ಹೆಚ್ಚಾಗಿ ಕಾಣಸಿಗುತ್ತಿದ್ದವು. ಆದರೆ ಈಗ ಇವುಗಳ ಸಂತತಿ ವಿನಾಶದ ಅಂಚಿಗೆ ತಲುಪಿದ್ದು, ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಮಥಾಯಿಸ್ ಡೆಸಾ.