ಕುಂದಾಪುರ: ದರಲೆ ತರಲು ಹೋದ ವ್ಯಕ್ತಿ ಹೊಳೆಯಲ್ಲಿ ಮುಳುಗಿ ಮೃತ್ಯು

ಕುಂದಾಪುರ: ಗದ್ದೆಯಲ್ಲಿ ದರಲೆ ತರಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಮುಡವಳ್ಳಿ ಎಂಬಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಮುಡವಳ್ಳಿಯ ನಿವಾಸಿ ನಾಗು ಕುಲಾಲ್ (65) ಮೃತ ದುರ್ದೈವಿ. ಇವರು ಫೆ. 22ರಂದು ಮಧ್ಯಾಹ್ನದ ಸುಮಾರಿಗೆ ಮನೆಯ ಹತ್ತಿರದ ಗದ್ದೆಯಲ್ಲಿ ದರಲೆ ತರಲು ಹೋಗಿದ್ದರು. ಬಳಿಕ ಅವರು ಮನೆಗೆ ವಾಪಸ್ಸು ಬಂದಿರಲಿಲ್ಲ. ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಫೆ. 23ರ ಮಧ್ಯಾಹ್ನ 3 ಗಂಟೆಗೆ ದಬ್ಬಾಡಿ ಹೊಳೆಯಲ್ಲಿ ನಾಗು ಕುಲಾಲ್ ಮೃತದೇಹ ದೊರೆತಿದ್ದು, ನಾಗು ಕುಲಾಲ್ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.