ಉಡುಪಿ: ನೂತನವಾಗಿ ರಚನೆಯಾದ ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟದ (ಎಫ್.ಓ.ಬಿ.ಎ.ಕೆ.ಎಸ್.) ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು: ಕಾರ್ಯಾಧ್ಯಕ್ಷ- ಲಿಂಗಾರೆಡ್ಡಿ ಚಿತ್ರದುರ್ಗ, ಉಪಾಧ್ಯಕ್ಷರು- ಸದಾನಂದ ಛಾತ್ರ ಉಡುಪಿ, ಮಂಜುನಾಥ ತುಮಕೂರು, ಅನ್ವರ್ ಪಾಶಾ ಚಾಮರಾಜನಗರ, ರಂಗಪ್ಪ ಶಿವಮೊಗ್ಗ, ಮಲ್ಲೇಶಪ್ಪ ದಾವಣಗೆರೆ, ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಮತ್ತು ವಜ್ರಗೌಡ ಮೈಸೂರು, ಪ್ರಧಾನ ಕಾರ್ಯದರ್ಶಿ- ಕೆ. ಕೆ. ಬಾಲಕೃಷ್ಣ ಚಿಕ್ಕಮಗಳೂರು.
ಕಾರ್ಯದರ್ಶಿ- ವಿಕ್ರಮ್ ಬೆಂಗಳೂರು, ಜೊತೆ ಕಾರ್ಯದರ್ಶಿಗಳು- ಜೀವಂಧರ ಅಧಿಕಾರಿ ಮಂಗಳೂರು, ಮಂಜೇಗೌಡ ಮಂಡ್ಯ, ಶಿವಗಣೇಶ್ ಬೆಂಗಳೂರು ಗ್ರಾಮಾಂತರ, ಮಾಧವ ನಾಯ್ಕ ಧಾರವಾಡ, ಆರ್. ಪಾರಿ ಮೈಸೂರು ಮತ್ತು ಶಿವಕುಮಾರ್ ಬೆಂಗಳೂರು.
ಸಂಘಟನಾ ಕಾರ್ಯದರ್ಶಿಗಳು- ಜ್ಯೋತಿಪ್ರಸಾದ್ ಹೆಗ್ಡೆ ಮಂಗಳೂರು, ಅಜ್ಜಪ್ಪ ಚಿತ್ರದುರ್ಗ ಮತ್ತು ಶಂಕರನಾರಾಯಣ ತುಮಕೂರು, ಕೋಶಾಧಿಕಾರಿ- ದಿಲ್ ರಾಜ್ ಆಳ್ವ ಮಂಗಳೂರು ಹಾಗೂ ಗೌರವ ಸಲಹೆಗಾರರು- ಜಯಪ್ರಕಾಶ ಶೆಣೈ ಮಂಗಳೂರು, ರತ್ನಾಕರ ಅಧಿಕಾರಿ ಧಾರವಾಡ ಮತ್ತು ಸುಭಾಷ್ ರೆಡ್ಡಿ ಚಿಕ್ಕಬಳ್ಳಾಪುರ ಅವರು ನೇಮಕಗೊಂಡಿದ್ದಾರೆ.