ಕುದುರೆಮುಖ: ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಬುಧವಾರ ಕುದುರೆಮುಖದಲ್ಲಿ ನಡೆದ ಕರ್ನಾಟಕದ ಶೋಲಾ ಅರಣ್ಯಗಳ ಕುರಿತ ವಿಶೇಷ ಕಾರ್ಯಾಗಾರ ಶೋಲಾ ಉತ್ಸವವನ್ನು ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆಯ ಮುಖ್ಯಸ್ಥ ಸಂಜಯ್ ಮೋಹನ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ನ ಮುಖ್ಯಸ್ಥ ಪ್ರೋ. ಕೆ.ವಿ.ಗಂಗಾಧರ್, ಮಂಗಳೂರು ಅರಣ್ಯ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಲ್ಕರ್, ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೆನ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೋಲಾ ಕಾಡುಗಳ ಬಗ್ಗೆ ಛಾಯಾಚಿತ್ರ ಸಂಪುಟ ಹಾಗೂ ಶೋಲಾಸ್ ಆಫ್ ಕುದುರೆಮುಖ ಮತ್ತು ನಮ ಶೋಲಾ ಎಂಬ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.