ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ
ಅನುಕೂಲಕ್ಕಾಗಿ ಮಂಗಳೂರು-ಹೊಸದುರ್ಗ ಮಾರ್ಗದಲ್ಲಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು ಈಗಾಗಲೇ
ಪ್ರಾರಂಭಿಸಲಾಗಿರುತ್ತದೆ.
ಸಾರಿಗೆಯು ಮಂಗಳೂರಿನಿಂದ ರಾತ್ರಿ 9.30 ಕ್ಕೆ ಹೊರಟು ಸುರತ್ಕಲ್-ಪಡುಬಿದ್ರೆ-ಉಡುಪಿ-ಮಣಿಪಾಲ-ಕುಂದಾಪುರ-ಅಂಪಾರು- ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗ-ಹೊಳೆಹೊನ್ನೂರು – ಚೆನ್ನಗಿರಿ-ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ಬೆಳಗ್ಗೆ 5.45 ಕ್ಕೆ ಹಾಗೂ ಮರುಪ್ರಯಾಣದಲ್ಲಿ ಹೊಸದುರ್ಗದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 6.15 ಕ್ಕೆ ಮಂಗಳೂರನ್ನು ತಲಪುತ್ತದೆ.
ಸದರಿ ಸಾರಿಗೆಯಲ್ಲಿ ಮಂಗಳೂರಿನಿಂದ ಹೊಸದುರ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 700 ರೂ.
ನಿಗದಿಪಡಿಸಲಾಗಿದ್ದು, ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ksrtc.karnataka.gov.in ಅಥವಾ ಹತ್ತಿರದ
ರಿಸರ್ವೇಶನ್ ಕೌಂಟರ್ ಹಾಗೂ ಮಂಗಳೂರು ಬಸ್ ನಿಲ್ದಾಣ ಮೊ.ನಂ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ : ಮೊ.ನಂ: 9663211553, ಉಡುಪಿ ಬಸ್ ನಿಲ್ದಾಣ ಮೊ.ನಂ : 9663266400, ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣ ಮೊ.ನಂ 7795984182 ಹಾಗೂ ಕುಂದಾಪುರ ಬಸ್ ನಿಲ್ದಾಣ ಮೊ.ನಂ :9663266009 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.