ಜುಲೈ 24: ಲಯನ್ಸ್ ಕ್ಲಬ್ ಯುಕ್ತಿ ಮಣಿಪಾಲ ಪದಪ್ರದಾನ ಸಮಾರಂಭ

ಮಣಿಪಾಲ: ದಿನಾಕ 24.07.2022 ರವಿವಾರ ಪೂರ್ವಾಹ್ನ 11.00 ಲಯನ್ಸ್ ಕ್ಲಬ್ ಯುಕ್ತಿ ಮಣಿಪಾಲ ಇದರ ನೂತನ ಅಧ್ಯಕ್ಷೆಯಾಗಿ ಲ. ಪೂರ್ಣಿಮಾ ಶೆಟ್ಟಿ ಕಾರ್ಯದರ್ಶಿಯಾಗಿ ಗಾಯತ್ರಿ ಎನ್. ನಾಯಕ್ ನರಸಿಂಗೆ ಕೋಶಾಧಿಕಾರಿಯಾಗಿ ಲ. ಮುಕ್ತ ಕುಮಾರಿ 2022-23ರ ಸಾಲನ್ನು ಮುನ್ನಡೆಸಲಿರುವರು. ಪದಪ್ರದಾನವನ್ನು ಲ. ಸುನಿಲ್ ಕುಮಾರ್ ಶೆಟ್ಟಿ ನೆರವೇರಿಸಲಿರುವರು.

ಅಖಿಲ ಭಾರತ ಮಟ್ಟದ ಕೆವಿಪಿವೈ ಪರೀಕ್ಷೆ: ಕಾರ್ಕಳ ಜ್ಞಾನಸುಧಾ ಕಾಲೇಜಿಗೆ 18 ರ‍್ಯಾಂಕ್

ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್ ನಡೆಸುವ ರಾಷ್ಟ್ರಮಟ್ಟದ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್‌ ಯೋಜನಾ (ಕೆವಿಪಿವೈ) ಪರೀಕ್ಷೆಯ ಪರಿಷ್ಕೃತ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ 18 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ರ‍್ಯಾಂಕ್ ಗಳಿಸಿದ್ದಾರೆ. ಕಾಲೇಜಿನ ಆರ್ಯ ಪಿ ಶೆಟ್ಟಿ 736 ನೇ, ಪ್ರಜ್ವಲ್ ಪಟಗಾರ್ 820 ನೇ, ಅಖಿಲ್ ವಾಗ್ಲೆ 1232 ನೇ, ಆರ್ಯನ್ ವಿದ್ಯಾಧರ್ ಶೆಟ್ಟಿ 1431ನೇ, ಕಾರ್ತಿಕ್ ಬ್ಯಾಕೊಡ್ 1745 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಜೊತೆಗೆ ಶಬರಿ.ಎನ್.ಶೆಟ್ಟಿ, ಸಾಗರ್‌ಎಚ್.ಪಿ, ಸೃಜನ್ ಶೆಟ್ಟಿ ಮಾರ್ಡಿ, […]

ಮುರುಡೇಶ್ವರ: ಟಾಟಾ ಮೋಟಾರ್ಸ್ ನಲ್ಲಿ ಉದ್ಯೋಗಾವಕಾಶ

ಮುರುಡೇಶ್ವರದ ಟಾಟಾ ಮೋಟಾರ್ಸ್ ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸೇವಾ ಸಲಹೆಗಾರ ಮತ್ತು ತಂತ್ರಜ್ಞ ಹುದ್ದೆ ಲಭ್ಯವಿದ್ದು, ಆಸಕ್ತರು manickmurudeshwar25@gmail.comಗೆ ತಮ್ಮ ಸ್ವ ವಿವರಗಳನ್ನು ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 08385-200625, 98455-10469 ಅನ್ನು ಸಂಪರ್ಕಿಸಬಹುದು. ವಿಳಾಸ: ಮ್ಯಾನಿಕ್ ಬ್ಯಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ರೈಲ್ವೆ ನಿಲ್ದಾಣದ ಹತ್ತಿರ ಮುರುಡೇಶ್ವರ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ-581350

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ: ಏಕಲವ್ಯ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಕ್ರೀಡಾಪಟುಗಳಿಂದ ಏಕಲವ್ಯ ಪ್ರಶಸ್ತಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಕ್ರೀಡೆಯ ಅಭಿವೃದ್ಧಿಗೆ ನೆರವು ನೀಡಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಕೊಡುಗೆ ನೀಡಿದ ಕ್ರೀಡಾ ಪೋಷಕರಿಂದ, ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, […]

ಬನ್ನಂಜೆ: ಸಾಂತ್ವನ ಮಹಿಳಾ ಸಹಾಯವಾಣಿ ಯೋಜನೆ ಕಾರ್ಯಾರಂಭ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಸಾಂತ್ವನ ಮಹಿಳಾ ಸಹಾಯವಾಣಿ ಯೋಜನೆಯು ಕಾರ್ಯಾರಂಭಗೊಂಡಿದ್ದು, ಪ್ರಸ್ತುತ ನಗರದ ಬನ್ನಂಜೆ ಹಳೇ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಈ ಯೋಜನೆಯಡಿ ಮಹಿಳೆಯರ ಮೇಲಾಗುವ ದೌರ್ಜನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಪ್ತಸಮಾಲೋಚನೆ ಹಾಗೂ ಕಾನೂನು ಸಲಹೆಗಳ ಮೂಲಕ ಬಗೆಹರಿಸಲಾಗುವುದು. ಸದ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.