ಶ್ರೀ ಕೃಷ್ಣ ಮಠ:ಶ್ರೀ ರಾಘವೇಂದ್ರ ಸ್ವಾಮಿ ರಾಯರ 348 ನೇ ಆರಾಧನೆ:ಪೂಜೆ

ಉಡುಪಿ:  ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ  ಶ್ರೀ ರಾಘವೇಂದ್ರ ಸ್ವಾಮಿ  ಮಠದಲ್ಲಿ ರಾಯರ 348 ನೇ ಆರಾಧನೆ ಪ್ರಯುಕ್ತ    ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹಲ್ಲಾದ ರಾಯರ ರಥೋತ್ಸವ ನಡೆಯಿತು. ಶ್ರೀ  ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪ್ರಹಲ್ಲಾದ ರಾಯರ ಉತ್ಸವ ಮೂರ್ತಿಗೆ ಪರ್ಯಾಯ ಶ್ರೀಪಾದರು ಮಂಗಳಾರತಿ ಮಾಡಿ ವಿಶೇಷ ಪೂಜೆ ನೆರವೇರಿಸಿದರು.