ಬೆಂಗಳೂರು: ಡಿಗ್ರಿಯಲ್ಲಿ ಎರೆಡೆರಡು ಬಾರಿ ಫೇಲ್ ಆಗಿದ್ದ ಅಭ್ಯರ್ಥಿಯೊಬ್ಬ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ (Veterinary Recruitment Scam) ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದು ತನಿಖೆ ನಡೆಸುತ್ತಿರುವ ಅಧಿಕಾರಿಗಳೇ ಸುಸ್ತಾಗಿದ್ದಾರೆ.
ವೆಟರ್ನರಿ ಡಿಗ್ರಿಯಲ್ಲಿ ಅಭ್ಯರ್ಥಿ ಸುಗರೇಶ್ ಜಾಕ್ ಎರೆಡೆರಡು ಬಾರಿ ಫೇಲ್ ಆಗಿದ್ದ. ಆದರೆ ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಟಾಪ್ 2ನಲ್ಲಿ ರ್ಯಾಂಕಿಂಗ್ ಬಂದಿದ್ದ. ಸುಗುರೇಶ್ ಎಕ್ಸಾಂ ಮಿರಾಕಲ್ಗೆ ಸಿಐಡಿ (CID) ಅಧಿಕಾರಿಗಳು ದಂಗಾಗಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರಣರಾದವರೇ 350 ಅಂಕ ದಾಟಿಲ್ಲ. ಸುಗುರೇಶ್ ಮಾತ್ರ ರ್ಯಾಂಕ್ ಬಂದಿರೋದು ಅಚ್ಚರಿಗೆ ಕಾರಣವಾಗಿದೆ. ʻ ಆದರೆ ಪಶು ವೈದ್ಯಾಧಿಕಾರಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 478 ಮಾರ್ಕ್ಸ್ ಬಂದಿದೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ಗೆ ಸುಗರೇಶ್ ಸಂಬಂಧಿಯಾಗಿದ್ದಾನೆ. ಶಿವಶಂಕರಪ್ಪ ಸಾಹುಕಾರ್ ಕೃಪಾಕಟಾಕ್ಷದಿಂದಲೇ ಇಷ್ಟೇಲ್ಲಾ ಆಯ್ತಾ ಎಂಬ ಅನುಮಾನ ಎದುರಾಗಿದೆ.















