ಕೋಟ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕೋಟ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಸ್ತಾನದ ಗುಂಡ್ಮಿ ಅಂಬಾಗಿಲು ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.

ಕೋಟ ಬನ್ನಾಡಿಯ ಸುಭಾಷ್ ಅಮೀನ್  (45) ಮೃತ ಬೈಕ್ ಸವಾರ. ಈತ ಸಿವಿಲ್ ಕಾಂಟ್ರಾಕ್ಟ್ ರಾಗಿದ್ದು, ಕೆಲಸ ನಿಮಿತ್ತ ಬನ್ನಾಡಿಯಿಂದ ಉಡುಪಿ ಕಡೆ ಹೋಗುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಅಪಘಾತ ನಡೆಸಿದ ಕಾರು ಚಾಲಕ ಕುಂದಾಪುರದ ಚರ್ಚ್ ವೊಂದರ ಫಾದರ್ ಆಗಿದ್ದು, ಅವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಸುಭಾಷ್ ಪತ್ನಿ, ಮಗು ಮತ್ತು ತಾಯಿಯನ್ನು ಅಗಲಿದ್ದಾರೆ.