ಹಿರಿಯಡ್ಕ: ಹಿರಿಯಡ್ಕ ಕೊಂಡಾಡಿ ಕುದಿಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾರಂಗ ಪೂಜೆ ಸಹಿತ ವಾರ್ಷಿಕ ಶೈವೋತ್ಸವವು ಫೆ.1ರಂದು ದೇವರ ಸನ್ನಿಧಿಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8 ಘಂಟೆಯಿಂದ ಗಣಯಾಗ, ಪಂಚವಿಂಶತಿ, ಕಲಶಾಧಿವಾಸ, ಪ್ರಧಾನ ಹೋಮ ಶತರುದ್ರಾಭಿಷೇಕ ಜರಗಲಿದ್ದು,
11 ಗಂಟೆಯಿಂದ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಬಿಲ್ವ ಮತ್ತು ಶ್ವೇತ ಪುಷ್ಪಾರ್ಚನೆ ನಡೆಯಲಿದೆ.
11.30ರಿಂದ ಭಕ್ತಿ ಸಂಗೀತ,12ರಿಂದ ಮಹಾಪೂಜೆ ಉತ್ಸವ ಬಲಿ ಪಲ್ಲಪೂಜೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 7ರಿಂದ ಆರಾಧನೆ ಪೂಜೆ, ಉತ್ಸವ ಬಲಿ, ಸುತ್ತು ಸೇವಾದಿಗಳು, ವಾಲಗ ಮಂಟಪ ಪೂಜೆ, ಭಜನಾ ಕಾರ್ಯಕ್ರಮಗಳು ಜರಗಲಿದೆ.
ರಾತ್ರಿ 9.30ರಿಂದ ಭರತನಾಟ್ಯ, 10.30 ರಿಂದ ಮಹಾರಂಗಪೂಜೆ, ಭೂತಬಲಿ ನಡೆಯಲಿದೆ.
ಫೆ. 2ರಂದು ಬೆಳಿಗ್ಗೆ ಮಹಾಸಂಪ್ರೋಕ್ಷಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ.21ರಂದು ಮಹಾಶಿವರಾತ್ರಿಯ ಪ್ರಯುಕ್ತ ಅಖಂಡ ಭಜನಾ ಮಹೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.