ಕೊಲ್ಲೂರು ಬೀನಾ ರೆಸಿಡೆನ್ಸಿ, ಅಶ್ವಥಿ ಹೋಟೆಲ್ ಮಾಲೀಕ ಧರ್ಮಬೀರು ಜಯಕೃಷ್ಣನ್ ನಿಧನ

ಅಸ್ಸಾಂ: ಕೇರಳದ ಪ್ರಸಿದ್ಧ ಉದ್ಯಮಿ, ಕೊಲ್ಲೂರಿನ ಬೀನಾ ರೆಸಿಡೆನ್ಸಿ ಮತ್ತು ಅಶ್ವಥಿ ಹೋಟೆಲ್ ಗಳ ಮಾಲೀಕ ಧರ್ಮಬೀರು ಜಯಕೃಷ್ಣನ್ (74 ) ಇಂದು ಅಸ್ಸಾಂನಲ್ಲಿ ಹೃದಯಾಘಾತದಿಂದ ನಿಧನ‌ ಹೊಂದಿದ್ದಾರೆ.

ಮಿತ್ರರೊಂದಿಗೆ ಅಸ್ಸಾಂನ ವಿವಿಧ ತೀರ್ಥಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದರು. ಅವರು ಇಂದು ಕೇರಳಕ್ಕೆ ವಾಪಸಾಗುವವರಿದ್ದರು ಎಂದು ತಿಳಿದುಬಂದಿದೆ.

ಇವರು ಕೇರಳದ ಮಾಹೆಯವರಾಗಿದ್ದು, ಪ್ರಸಿದ್ಧ ‘ಕಾಕಟ್ಟೆ’ ಸಮೂಹ ಉದ್ಯಮಗಳ ಮಾಲೀಕರಾಗಿದ್ದಾರೆ. ಕೊಲ್ಲೂರು ಉಡುಪಿ ಸೇರಿದಂತೆ ದಕ್ಷಿಣ ಭಾರತದ ಅನೇಕ ದೇವಾಲಯಗಳಲ್ಲಿ ನಡೆಯುವ ಅನ್ನಾರಾಧನೆಗೆ ಹಾಗೂ ಕೇರಳ ತಮಿಳುನಾಡು ಕರ್ನಾಟಕಗಳಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಭರಪೂರ ನೆರವು ನೀಡುತ್ತಿದ್ದರು.
ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ .