ಟಿ-20 ತಂಡದ ನಾಯಕತ್ವ ತೊರೆಯಲು ಕೊಹ್ಲಿ ನಿರ್ಧಾರ

ನವದೆಹಲಿ: ಟಿ-20 ತಂಡದ ನಾಯಕತ್ವ ತೊರೆಯಲು‌ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, ಟಿ-20 ವಿಶ್ವಕಪ್ ನಂತರ  ಸೀಮಿತ ಓವರ್ ಗಳ ತಂಡದ ನಾಯಕತ್ವ ತೊರೆಯುವುದಾಗಿ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಟಿ-20 ವಿಶ್ವಕಪ್ ನಂತರ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಟೀಂ ಇಂಡಿಯಾ ನಾಯಕತ್ವವನ್ನು ಕೊಹ್ಲಿ ತೊರೆಯಲಿದ್ದಾರೆ ಎಂಬ ಸುದ್ದಿಹಬ್ಬಿತ್ತು. ಇದೀಗ ಸ್ಪಷ್ಟನೆ ನೀಡಿರುವ ವಿರಾಟ್, ಟಿ-20 ನಾಯಕತ್ವವನ್ನು ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ.