ಕೊಡವೂರು: ಇಲ್ಲಿನ (ಸರ್ಕಲ್) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ನಾಗರಿಕರಿಗೆ ಕುಡಿಯಲು ನೀರಿನ ಅವಶ್ಯಕತೆಯನ್ನು ಗಮನಿಸಿ ಯಾವುದೇ ಸರಕಾರದ ಅನುದಾನವನ್ನು ಕಾಯದೆ ಸ್ವತಃ ಊರಿನ ಜವಾಬ್ದಾರಿಯುತವಾದ ಸಂಘ ಸಂಸ್ಥೆಗಳ ಸಹಕಾರದಲ್ಲಿ, ಊರಿನ ದಾನಿಗಳ ಸಹಕಾರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು.
ಕೊಡವೂರು ಶಾಲೆಯಲ್ಲಿ ಕಳೆದ 30 ವರ್ಷಕ್ಕಿಂತ ಅಧಿಕ ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಾದ ಮಲ್ಲಿಕಾದೇವಿಯವರನ್ನು ಬೀಳ್ಕೊಡುವ ಮುಖಾಂತರ ಅವರ ಮತ್ತು ಶಾಲೆಯ ಸಂಬಂಧವನ್ನು ನೆನಪು ಮಾಡುವ ಕಾರ್ಯ ಇದಾಗಿದೆ. ಈ ಮುಖಾಂತರ ಕೊಡವೂರಿನ ನಾಗರಿಕರಿಗೆ ಮತ್ತು ಕೊಡವೂರಿನ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಶುದ್ಧ ನೀರು ದೊರೆಯುವಂತಾಗಿದೆ. ಈ ಮುಖಾಂತರ ಇಂತಹ ಅನೇಕ ಕಾರ್ಯಗಳು ಕೊಡವೂರಿನಲ್ಲಿ ನಡೆಯುತ್ತಾ ಬಂದಿದೆ. ಯಾವುದೇ ಕೆಲಸಕ್ಕೂ ಸರಕಾರದ ಅನುದಾನವನ್ನು ಕಾಯುವುದಲ್ಲ ಬದಲಾಗಿ ಇಂತಹ ಮೂಲಭೂತ ಸೌಕರ್ಯಗಳಿಗೆ ಸಂಘ-ಸಂಸ್ಥೆಗಳು ತಮ್ಮ ಜವಾಬ್ದಾರಿಯಿಂದ ಊರಿನ ದಾನಿಗಳಿಂದ ಹಣವನ್ನು ಸಂಗ್ರಹಿಸಿ ಇಂತಹ ಕಾರ್ಯವನ್ನು ಮಾಡುವುದೇ ಮಾದರಿ ಗ್ರಾಮದ ಮತ್ತೊಂದು ಹೆಜ್ಜೆ.
ಈ ಮುಖಾಂತರ ಸಹಕರಿಸಿದ ಸಂಘ-ಸಂಸ್ಥೆಗಳಿಗೆ, ನಾಗರಿಕರಿಗೆ ಧನ್ಯವಾದವನ್ನು ಕೊಡವೂರು ವಾರ್ಡಿನ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ತಿಳಿಸಿದರು.
ಕುಡಿಯುವ ನೀರಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭಾ ಸದಸ್ಯ ವಿಜಯ ಕೊಡವೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.