ಕೊಡವೂರು: ‘ಬಲೆ ತುಳು ಲಿಪಿ ಕಲ್ಪುಗ’ ಕಾರ್ಯಾಗಾರದ ಸಮಾರೋಪ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ ಕೊಡವೂರು ಇವರ ಸಹಯೋಗದೊಂದಿಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಆಯೋಜಿಸಿದ ‘ಬಲೆ ತುಳು ಲಿಪಿ ಕಲ್ಪುಗ’ ಕಾರ್ಯಾಗಾರದ ಸಮಾರೋಪ ಸಮಾರಂಭದ ಕಾರ್ಯಕ್ರಮ ನಡೆಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ, ತುಲು ಲಿಪಿ ಇನ್ನಷ್ಟು ಆಧುನಿಕತೆ ತಂತ್ರಜ್ಞಾನಕ್ಕೆ ಬಂದು ಪ್ರತಿ ಊರುಗಳಲ್ಲಿಯೂ ಪರಿಚಯ ಆಗುವಂತೆ ಆಗಬೇಕು. ಯುವಪೀಳಿಗೆ ತುಲು ಲಿಪಿಯನ್ನು ಮುಂದೆ ಕೊಂಡು ಹೋಗುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮಾತನಾಡಿ, ತುಳು ಲಿಪಿ ತುಳು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನರು ಇನ್ನಷ್ಟು ತುಳು ಲಿಪಿ ಕಲಿಯಬೇಕು ಎಂದು ಹೇಳಿದರು.

ಕೊಡವೂರು ಶಾಲೆಯಲ್ಲಿ 36 ವರ್ಷ ಸೇವೆ ಮಾಡಿದ ಹಾಗೂ ಕೊಡವೂರು ಶಾಲೆಯಲ್ಲಿ ತುಲು ಲಿಪಿ ಬೆಳವಣಿಗೆಗೆ ನಿರಂತರವಾಗಿ ಬೆನ್ನೆಲುಬಾದ ಅಧ್ಯಾಪಕಿ ಮಲ್ಲಿಕಾ ದೇವಿ ಅವರಿಗೆ ಸನ್ಮಾನ ಮಾಡಲಾಯಿತು.
ಕೊಡವೂರಿನಲ್ಲಿ ಅತೀ ಹೆಚ್ಚು ಮಂದಿ ತುಳು ಲಿಪಿ ಕಲಿತ್ತಿದ್ದಾರೆ. ಹಾಗೆ ಸರಿ ಸುಮಾರು 300 ಜನ ಲಿಪಿ ಕಲಿಯುವ ಆಸಕ್ತಿ ತೋರಿಸಿದ್ದಾರೆ.

ಇದೇ ಸಮಯದಲ್ಲಿ ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಡವೂರು ಶಂಕರನಾರಾಯಣ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ್ ಕೊಡವೂರು, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಬಂಧಕಿ ಯಶೋಧ ಕೇಶವ, ರಾಮ ಶೇರಿಗಾರ್, ಕೊಡವೂರು ಶಾಲಾ ಶಿಕ್ಷಕಿ ಮಲ್ಲಿಕಾ ದೇವಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ
ತಾರಾ ಉಮೇಶ್ ಆಚಾರ್ಯ, ಶರತ್ ಕೊಡವೂರು, ಸ್ವಾತಿ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಜೈ ತುಲುನಾಡ್ ಸಂಘದ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಉಜ್ವಲ ಪೂಜಾರಿ ಉಪಸ್ಥಿತರಿದ್ದರು.

ಶರತ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ತುಳುವೆ ಸ್ವಾಗತಿಸಿದರು. ಬನಶ್ರೀ ಕಲ್ಮಾಡಿ ವಂದಿಸಿದರು. ಸ್ವಾತಿ ಸುವರ್ಣ ಮತ್ತು ರಮ್ಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಸುಷ್ಮಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.