ಕೊಡವೂರು ದೇವಳದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ

ಕೊಡವೂರು: ಇಲ್ಲಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಅಕ್ಟೋಬರ್ 7ರ ಗುರುವಾರದಂದು ಕದಿರು ಕಟ್ಟುವ ಕಾರ್ಯಕ್ರಮದ ಅಂಗವಾಗಿ ಕದಿರು ಪ್ರಸಾದ ಸ್ವೀಕರಿಸಲು ಬರುವ ಭಕ್ತಾಧಿಗಳಿಗೆ ಅವರವರ ಮನೆಯಲ್ಲಿ ಕಟ್ಟಲು ಬೇಕಾದಷ್ಟು ಕದಿರನ್ನು ನೀಡುವ ಸಲುವಾಗಿ ದೇವಳದ ಗದ್ದೆಯಲ್ಲಿ ಉಳುಮೆ ಮಾಡಿ ನೇಜಿ ನೆಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ಸಾಧು ಸಾಲಿಯಾನ್, ಕಾರ್ಯದರ್ಶಿ ಪ್ರಕಾಶ್ ಜಿ ಕೊಡವೂರ್, ಗೌರವಾಧ್ಯಕ್ಷ ರವಿರಾಜ್  ಹೆಗ್ಡೆ, ಸದಸ್ಯರಾದ ಜನಾರ್ದನ್  ಕೊಡವೂರ್, ರಾಜ ಎ ಶೇರಿಗಾರ್, ಕೋಶಾಧಿಕಾರಿ ರಾಮ ಶೇರಿಗಾರ್ ಹಾಗು  ದೇವಳದ ಪರಿಸರದ ಮಹಿಳೆಯರಾದ ಪಾರ್ವತಿ ಪೂಜಾರ್ತಿ, ಕಲ್ಯಾಣಿ ಪೂಜಾರ್ತಿ, ಶಕುಂತಲ ಮಡಿವಾಳ್ತಿ, ಸರೋಜಿನಿ ಮತ್ತು ಲಲಿತ ಸಹಕರಿಸಿದರು.