ಉಡುಪಿ: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 25 ರಿಂದ ಫೆಬ್ರವರಿ 5ರ ವರೆಗೆ ಶ್ರೀ ದೇವಳದ ಮಹಾರಥೋತ್ಸವ ಹಾಗೂ ರಾಶಿ ಪೂಜೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪನ್ನಗೊಳ್ಳಲಿವೆ.
ಧಾರ್ಮಿಕ ಕಾರ್ಯಕ್ರಮಗಳು:
ಜ. 25 ರಂದು ದೇವಳದ ವಾರ್ಷಿಕ ಮಹೋತ್ಸವದ ಸಪ್ತೋತ್ಸವ ಪ್ರಾರಂಭ, ಸಂಜೆ 4.30ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ. ಜ. 26ರಂದು ಬೆಳಿಗ್ಗೆ 8ಕ್ಕೆ ಗಣಯಾಗ, ಸಂಜೀವಿನಿ ಮೃತ್ಯುಂಜಯ ಯಾಗ. ಜ.27 ಬೆಳಿಗ್ಗೆ 8ಕ್ಕೆ ವಿಷ್ಣುಯಾಗ, ಶಾಂತಿ ಹೋಮ, ಸಾಯಂಕಾಲ 7.30ಕ್ಕೆ ಅಂಕುರ ಬಲಿ, ಅಂಕುರಾರೋಹಣ.
ಜ.28 ಬೆಳಿಗ್ಗೆ 6.36ಕ್ಕೆ ಮಕರ ಲಗ್ನದಲ್ಲಿ ಸಾನಿಧ್ಯ ಕಲಶಾಭಿಷೇಕ, 8.45ಕ್ಕೆ ಧ್ವಜಾರೋಹಣ, ಸಂಜೆ 4.30ಕ್ಕೆ ಹೂ ಕಾಯಿ ಮೆರವಣಿಗೆ ಕಾನಂಗಿ ಮೆಂಕಟರಾಯರ ಮನೆಯಿಂದ, ರಾತ್ರಿ 10ಕ್ಕೆ , ಮಹಾರಂಗ ಪೂಜೆ. ಜ.29 ಬೆಳಿಗ್ಗೆ 9.00ಕ್ಕೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಂಜೆ 6.30ಕ್ಕೆ ಕಟ್ಟೆಪೂಜೆ. ಜ.30ಕ್ಕೆ ಬೆಳಿಗ್ಗೆ 11.00ಕ್ಕೆ ರಥಾರೋಹಣ, ಮಧ್ಯಾಹ್ನ 12.10ಕ್ಕೆ ಅನ್ನಸಂತರ್ಪಣೆ, ರಾತ್ರಿ 8.00ಕ್ಕೆ ಮಹಾರಥೋತ್ಸವ, ಪಿಲಾರು ಶ್ರೀಧರ ಉಡುಪರಿಂದ ನರ್ತನ ಸೇವೆ.
ಜ.31 ಬೆಳಿಗ್ಗೆ 7.00ರಿಂದ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ 3.00ಕ್ಕೆ ಕಟ್ಟೆಪೂಜೆ, ಸಂಜೆ 6.00ಕ್ಕೆ ಕೆರೆಮಠದ ಸರೋವರದಲ್ಲಿ ತೆಪ್ಪೋತ್ಸವ, ಅವಭೃತ.
ಫೆ.01 ಬೆಳಿಗ್ಗೆ 8.00ಕ್ಕೆ ಗಣಯಾಗ, ಸಂಪ್ರೋಕ್ಷಣೆ, ವರಮಹಾಲಕ್ಷ್ಮೀ ಪೂಜೆ, ಮಹಾಮಂತ್ರಾಕ್ಷತೆ. ಫೆ.02 ಗೋಳಿಕಟ್ಟೆ ನಾಗಬನ, ಶ್ರೀ ದೇವಳದ ನಾಗಬನದಲ್ಲಿ ಆಶ್ಲೇಷ ಬಲಿ, ಸಾಯಂಕಾಲ 7.00ರಿಂದ ಗೋಳಿಕಟ್ಟೆ ನಾಗಬನದಲ್ಲಿ ಹಾಲಿಟ್ಟು ಸೇವೆ, ಶ್ರೀ ದೇವಳದಲ್ಲಿ ಢಕ್ಕೆ ಬಲಿ. ಫೆ.03 ಬೆಳಿಗ್ಗೆ 8.30ಕ್ಕೆ ರಾಶಿಪೂಜಾ ಪ್ರಯುಕ್ತ ದೇವತಾ ಪ್ರಾರ್ಥನೆ, ನವಕ ಪ್ರಧಾನ ಹೋಮ, ಸಂಜೆ 5.00ಕ್ಕೆ ರಾಶಿಪೂಜಾ ಮಂಡಲ ರಚನೆ ಪ್ರಾರಂಭ, ರಂಗಪೂಜೆ.
ಫೆ.04 ಬೆಳಿಗ್ಗೆ 4.00ಕ್ಕೆ ರಾಶಿ ಪೂಜಾ ಕಲಶಾಧಿವಾಸ, ಅಧಿವಾಸ ಯಾಗ, 5.30ಕ್ಕೆ ಸಂಕಲ್ಪ ,ಭಾರತೀ ಪೂಜೆ, ದೇವರ ನಾಮ ಸಂಕೀರ್ತನೆ ಪ್ರಾರಂಭ, 6.56ಕ್ಕೆ ಮಕರ ಲಗ್ನದಲ್ಲಿ ರಾಶಿ ಪೂಜೆ ಪ್ರಾರಂಭ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ. ಫೆ.05 ಕ್ಕೆ ಬೆಳಿಗ್ಗೆ 06.00ಕ್ಕೆ ಉದ್ಯಾಪನಾ ಬಲಿ, ಪ್ರಸನ್ನ ಪೂಜೆ. ಪ್ರಸಾದ ವಿತರಣೆ.
ಹೊರೆಕಾಣಿಕೆ , ಮಹಾ ಅನ್ನಸಂತರ್ಪಣೆ ಫೆ.01 ಸಂಜೆ 4.00ಕ್ಕೆ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಮಲ್ಪೆ ಅಯ್ಯಪ್ಪ ಮಂದಿರದಿಂದ ಹೊರಡಲಿದೆ. ಫೆ.04 ಮಧ್ಯಾಹ್ನ 12.15 ಕ್ಕೆ ರಾಶಿಪೂಜಾ ಪ್ರಯುಕ್ತ ಮಹಾ ಅನ್ನಸಂತರ್ಪಣೆ ಜರಗಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ:
ಜ.30 ರಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಡವೂರು ಪ್ರಕಾಶ್ ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಉದ್ಯಮಿ ಮಂಜುನಾಥ್ ಭಟ್ ಮೂಡುಬೆಟ್ಟು ಭಾಗವಹಿಸಲಿದ್ದಾರೆ. ಶ್ರೀ ದೇವಳದಲ್ಲಿ ಅನನ್ಯ ಸೇವೆ ಸಲ್ಲಿಸಿದ ಕಾಂತಪ್ಪ ಕರ್ಕೇರ, ಪಿ.ರತ್ನ ಬಾಯರಿ, ಶ್ರೀಶ ಬಲ್ಲಾಳ್, ರತ್ನಾಕರ ಆಚಾರ್ಯ, ವಿಶ್ವನಾಥ್ ಭಟ್ ಹಾಗೂ ಪರ್ಸಿನ್ ಬೋಟ್ ಮಾಲೀಕರ ಸಂಘಕ್ಕೆ “ಶ್ರೀ ಶಂಕರನಾರಾಯಣಾನುಗ್ರಹ” ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ.30 ರಂದು ಬೆಳಿಗ್ಗೆ 11.50ಕ್ಕೆ ಕೊಡವೂರು ಸದಾನಂದ ಸೇರಿಗಾರ ಮತ್ತು ಬಳಗದಿಂದ ಸಾಕ್ಸೋಫೋನ್ ವಾದನ, ಸಂಜೆ 5.30ಕ್ಕೆ ಬೆಂಗಳೂರಿನ ಜಯಶ್ರೀ ಅರವಿಂದ ಬಳಗದಿಂದ ಭಕ್ತಿಗಾನ ಸುಧೆ ಜರಗಲಿದೆ. ಜ.31 ರಂದು ರಾತ್ರಿ 9.00ಕ್ಕೆ ಬಂಟ್ವಾಳ ದೇಂತಡ್ಕ ಮೇಳದವರಿಂದ “ಬ್ರಹ್ಮಬೈದ್ಯೆರ್” ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ ಖ್ಯಾತ ಹಾಸ್ಯನಟರಾದ ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ.
ಫೆ.04 ರಂದು ಮಧ್ಯಾಹ್ನ 12.15ಕ್ಕೆ ರೋಹಿತ್ ಮಲ್ಪೆ ಮತ್ತು ಬಳಗದವರಿಂದ ಭಾವಯಾನ ಸುಗಮ ಸಂಗೀತ, ರಾತ್ರಿ ಗಂಟೆ 7.30ರಿಂದ ಹಟ್ಟಿಯಂಗಡಿ ಶ್ರೀ ಕ್ರಪಾ ಪೋಷಿತ ಯಕ್ಷಗಾನ ಮಂಡಳಿ ಇವರಿಂದ ಪೌರಾಣಿಕ ಕಥಾನಕ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಹಾಗೂ ರಾಶಿ ಪೂಜಾ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ