ಮಲ್ಪೆ: ಕೊಡವೂರು ಬ್ರಾಹ್ಮಣ ಮಹಾಸಭಾ ಸ್ಥಾಪನೆಯಾಗಿ 2022ಕ್ಕೆ 25 ಸಾರ್ಥಕ ಸಂವತ್ಸರಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2021ರ ಎಪ್ರಿಲ್ ತಿಂಗಳಿನಿಂದ 2022ರ ಎಪ್ರಿಲ್ ತಿಂಗಳವರೆಗೆ ಒಂದು ವರ್ಷದ ಕಾಲ “ರಜತ ಪಥದಲ್ಲಿ ವಿಪ್ರ ನಡಿಗೆ” ಎಂಬ ಶಿರೋನಾಮೆಯಡಿಯಲ್ಲಿ ರಜತೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಈ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭವು ಎಪ್ರಿಲ್ 14ರಂದು ನಡೆಯಲಿದೆ ಎಂದು ಮಹಾಸಭಾ ತಿಳಿಸಿದೆ.
ಇದೇ ಸಂದರ್ಭದಲ್ಲಿ ಶಾಶ್ವತ ಕಾರ್ಯಕ್ರಮವಾಗಿ ಸಂಸ್ಥೆಯ ಸಾಂಸ್ಕೃತಿಕ ಕಲಾಭವನ “ವಿಪ್ರಶ್ರೀ” ಯ ವಿಸ್ತರಣೆ ಹಾಗೂ ನೂತನ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಹಾಕಿಕೊಳ್ಳಲು ಮಹಾಸಭಾದ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಜತೋತ್ಸವ ಸಮಿತಿ ರಚನೆ:
ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು, ರಜತೋತ್ಸವ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಗೌರವಾಧ್ಯಕ್ಷರಾಗಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚಿಸಿ, ಮಾರ್ಗದರ್ಶನ ನೀಡಲಿರುವರು.
ಅಧ್ಯಕ್ಷರಾಗಿ ಶಾಸಕ ಕೆ. ರಘುಪತಿ ಭಟ್, ಕಾರ್ಯಾಧ್ಯಕ್ಷರಾಗಿ ಮಂಜುನಾಥ ಭಟ್ ಮೂಡುಬೆಟ್ಟು, ಉಪಾಧ್ಯಕ್ಷರುಗಳಾಗಿ ನಾರಾಯಣ ಬಲ್ಲಾಳ್, ಶ್ರೀಶ ಕೊಡವೂರು, ಗಣೇಶ್ ಮಧ್ಯಸ್ಥ, ರಾಘವೇಂದ್ರ ಬಾಯರಿ, ಸುರೇಶ್ ಭಟ್, ಲಕ್ಷ್ಮೀನಾರಾಯಣ ಭಟ್ ಆದಿಉಡುಪಿ, ಗುರುರಾಜ ಐತಾಳ್, ಸುರೇಂದ್ರ ಉಪಾಧ್ಯಾಯ, ಮುರಳಿ ತಂತ್ರಿ, ಶೀನಿವಾಸ ಉಪಾಧ್ಯಾಯ ಕಂಬಳಕಟ್ಟ, ಶ್ರೀನಿವಾಸ ಉಪಾಧ್ಯಾಯ, ಕೊಡವೂರು, ವಾಸುದೇವ ಐತಾಳ್, ನಾಗರಾಜ ಐತಾಳ್, ದಿನೇಶ್ ರಾವ್, ರಾಮಕೃಷ್ಣ ರಾವ್, ಸುದರ್ಶನ್ ರಾವ್, ಸತೀಶ್, ಶಾಂತಾರಾಮ ಸೋಮಯಾಜಿ, ಸತೀಶ್ ಕೆರೆಮಠ, ಮಧ್ವೇಶ್, ಯು.ಕೆ. ಭಟ್, ಮಧುಸೂದನ್ ಭಟ್, ಉಮೇಶ್ ಬಾಧ್ಯ, ಅಡಿಗ ರಾಘವೇಂದ್ರ ಭಟ್, ಬಾ ಸಾಮಗ, ರಾಮಚಂದ್ರ ಅಡಿಗ ಕಲ್ಮಾಡಿ, ವಿಶ್ವನಾಥ ಭಟ್, ಭಾಸ್ಕರ ಭಟ್ ಕೆರೆಮಠ.
ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ರಾವ್, ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ರಾವ್, ಕಾರ್ಯದರ್ಶಿಗಳಾಗಿ ಮುರಳೀಧರ್, ಅನಂತಪದ್ಮನಾಭ ಭಟ್, ಶ್ರೀನಿವಾಸ ಬಾಯರಿ, ವಿಜಯಾ ದಿನೇಶ್, ಭಾರತಿ ಸುಬ್ರಹ್ಮಣ್ಯ, ಕೋಶಾಧಿಕಾರಿಗಳಾಗಿ ಶ್ರೀಧರ ಶರ್ಮ, ಪ್ರವೀಣ್ ಬಲ್ಲಾಳ್, ಪ್ರಜ್ವಲ್, ಲಕ್ಷ್ಮಣ ಹಂದೆ ನೇಮಕಗೊಂಡಿದ್ದಾರೆ.
ಧಾರ್ಮಿಕ ಸಮಿತಿ: ಲಕ್ಷ್ಮೀ ನಾರಾಯಣ ಭಟ್ ಅಗ್ರಹಾರ, ಡಾ. ಶ್ರೀಕಾಂತ ಬಾಯರಿ, ಶಿವರಾಜ ಉಪಾಧ್ಯಾಯ, ಗಿರಿರಾಜ ಉಪಾಧ್ಯಾಯ, ಶಶಿ ಹೆಬ್ಬಾರ್, ಪ್ರಸಾದ್ ಭಟ್.
ಸಾಂಸ್ಕೃತಿಕ ಸಮಿತಿ :ಕಲ್ಪನಾ ಭಟ್, ಪವಿತ್ರ ಸಾಮಗ, ರಾಜೆಶ್ರೀ ಪ್ರಸನ್ನ, ರೋಹಿಣಿ ಬಾಯರಿ, ನಿರ್ಮಲ ಮಂಜುನಾಥ್.
ಪ್ರಚಾರ ಸಮಿತಿ: ಪ್ರಸನ್ನ ಭಟ್, ಶ್ರೀಶ ಬಲ್ಲಾಳ್, ಜನಾರ್ದನ ಕೊಡವೂರು, ರಾಧಾಕೃಷ್ಣ ಭಟ್, ಮುರಳೀಧರ್ ಭಟ್.
ಸ್ಮರಣ ಸಂಚಿಕೆ ಸಮಿತಿ: ಪೂರ್ಣಿಮಾ ಜನಾರ್ದನ್, ಡಾ. ಶ್ರೀಕಾಂತ ಬಾಯರಿ, ಗಿರಿರಾಜ ಉಪಾಧ್ಯಾಯ, ಚೈತನ್ಯ ಎಂ ಜಿ, ಅನುಪಮಾ.
ವಿದೇಶ ಸಮಿತಿ: ಕಿರಣ್ ಹೊಳ್ಳ, ವರುಣ್ ರಾವ್, ದೀಪಕ್ ರಾವ್, ಶ್ರೀಪತಿ ಬಾಯರಿ, ದಿನೇಶ್ ಬಾಯರಿ, ಶ್ರೀಶ ಐತಾಳ್, ಗುರುರಾಜ ಐತಾಳ್, ಗುರುರಾಜ ರಾವ್, ಲತಾ ಗುರುರಾಜ, ಎ. ಕೆ. ಭಟ್, ಕಾನಂಗಿ ಶ್ರೀನಿವಾಸ ಉಪಾಧ್ಯಾಯ, ಪ್ರಸಾದ್ ರಾವ್.
ಸದಸ್ಯರಾಗಿ ವಸಂತ ರಾವ್, ಕಿರಣ್ ರಾವ್, ಶರತ್, ರಾಮಮೂರ್ತಿ ಬಲ್ಲಾಳ್, ರಾಮ ಐತಾಳ್, ಲಕ್ಷ್ಮಿ ಬೆಳ್ಕಳೆ, ಲಕ್ಷ್ಮಿ ಗುರುರಾಜ, ಭಾರತಿ ಪ್ರಸಾದ್, ಪ್ರೇಮ ಬಾಯರಿ, ಹರಿಣಿ, ಮಾನಸಿ ಸುಧೀರ್, ಪ್ರದೀಪ್ ರಾವ್, ಕಾವ್ಯ, ಚಂದನ್, ಚರಣ್, ಸುಕುಮಾರ್, ಆಕಾಶ್ ಹೆಬ್ಬಾರ್, ವಿಲಾಸ್ ರಾವ್, ಸಂತೋಷ ಸಾಮಗ, ಶ್ಯಾಮ ಭಟ್, ಲಕ್ಷ್ಮೀನಾರಾಯಣ ಭಟ್, ದೀಪಾ ರಾಮಕೃಷ್ಣ, ಡಾ. ಶ್ರೀಕಾಂತ ಭಟ್ ಕೊಲ್ಲೂರು, ನರಸಿಂಹ ಉಪಾಧ್ಯಾಯ ಕಾನಂಗಿ, ಶ್ರೀನಿವಾಸ್ ರಾವ್ ಕಾನಂಗಿ, ಸನತ್, ಶಿವಕುಮಾರ್ ಕಲ್ಕೂರ್, ಸುಮಂಗಲ ರಾವ್, ವಾಸುದೇವ ಭಟ್ ಮಣಿಪಾಲ, ಶ್ರೀನಿವಾಸ ಕೇಕುಡ, ರವಿ ಕೆದ್ಲಾಯ. ಮಾಧವ ಭಟ್, ಲಕ್ಷ್ಮಿ ರಾವ್, ಸ್ನೇಹ ರಾವ್, ಶ್ರೀನಿವಾಸ ಬಲ್ಲಾಳ್ ಮತ್ತು ಶಶಿಕುಮಾರ್ ಅವರು ಆಯ್ಕೆಯಾಗಿದ್ದಾರೆ.