ಉಡುಪಿ: ಉಡುಪಿಯಲ್ಲಿ ಕೆಜಿಎಫ್ ಚಲನಚಿತ್ರ ಟಿಕೆಟ್ ಸಿಗದ ಹಿನ್ನೆಲೆ ಯಶ್ ಅಭಿಮಾನಿಗಳು ದಾಂದಲೆ ನಡೆಸಿದ ಘಟನೆ ಅಲಂಕಾರ್ ಚಿತ್ರಮಂದಿರದಲ್ಲಿ ನಡೆದಿದೆ.
ಕೆಜಿಎಫ್ ಚಲನಚಿತ್ರ ರಾಜ್ಯಾದ್ಯಂತ ಮಾತ್ರವಲ್ಲದೆ ದೇಶವಿದೇಶಗಳಲ್ಲಿ ಶುಕ್ರವಾರ ಬಿಡುಗಡೆ ಗೊಂಡಿದೆ . ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರಥಮ ಪ್ರದರ್ಶನ ಮುಂಜಾನೆ ೧೦ ಕ್ಕೆ ಪ್ರಾರಂಭವಾಗಿತ್ತು. ಆದಾಗಲೇ ೧೦೦ಕ್ಕೂ ಹೆಚ್ಚು ಯಶ್ ಅಭಿಮಾನಿಗಳು ನಿರಾಸೆಗೊಂಡಿದ್ದರು .
ಮಧ್ಯಾಹ್ನದ ಟಿಕೆಟ್ ಈಗಾಗಲೇ ನೀಡಬೇಕೆಂದು ಚಲನಚಿತ್ರದ ಮಂದಿರದ ಸಿಬ್ಬಂದಿಗಳಲ್ಲಿ ವಾಗ್ವಾದಕ್ಕೆ ಇಳಿದರು. ಮಾತ್ರವಲ್ಲದೆ ಭದ್ರತೆಗೆ ಅಳವಡಿಸಿದ ಗೇಟ್ ಗಳನ್ನು ಮುರಿದು ಚಿತ್ರಮಂದಿರದ ಒಳಗೆ ನುಗ್ಗಲು ಪ್ರಯತ್ನಿಸಿದರು . ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಮಂದಿರದ ಸಿಬ್ಬಂದಿಗಳು ನಗರ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯಶ್ ಅಭಿಮಾನಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು, ಅದಕ್ಕೂ ಅವರು ಒಪ್ಪದಿದ್ದಾಗ ಚಿತ್ರಮಂದಿರದ ಸಿಬ್ಬಂದಿಗಳು ೧೧ ಗಂಟೆಯ ಶೋಗೆ ಟಿಕೆಟ್ ನೀಡುವುದಾಗಿ ಹೇಳಿ ಸಮಾಧಾನ ಪಡಿಸಿ ಕಳುಹಿಸಿ ಕೊಟ್ಟರು .