ಕೆರ್ವಾಶೆ: ವ್ಯಕ್ತಿ ನಾಪತ್ತೆ

ಕೆರ್ವಾಶೆ: ಗೇರುಬೀಜ ಫ್ಯಾಕ್ಟರಿಗೆ ಹೋಗುವುದಾಗಿ ತಿಳಿಸಿ ಹೋದ ವ್ಯಕ್ತಿಯೊಬ್ಬರು ಬಳಿಕ ಮನೆಗೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದಲ್ಲಿ ನಡೆದಿದೆ.

ಕೆರ್ವಾಶೆ ಗ್ರಾಮದ ಅನುಷಾ ಎಂಬರ ಗಂಡ 37 ವರ್ಷ ಪ್ರಾಯದ ಮಹೇಶ್ ಶೆಟ್ಟಿ ನಾಪತ್ತೆಯಾದ ವ್ಯಕ್ತಿ. ಇವರು ಗೇರುಬೀಜ ಕಟ್ಟಿಂಗ್ ಮಾಡುವ ಹಾಗೂ ಹೋಟೆಲ್ ಗಳಿಗೆ ನೀರು ದೋಸೆ ತಯಾರಿಸಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು.

ಜೂ.15ರಂದು ಬೆಳಿಗ್ಗೆ 9:45ಕ್ಕೆ ಗೇರುಬೀಜ ಪ್ಯಾಕ್ಟರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಈವರೆಗೂ ಮನೆಗೆ ಬಂದಿಲ್ಲ. ಮೊಬೈಲ್‌ ಕೂಡ ಸ್ವಿಚ್ಛ್‌ ಆಫ್‌ ಆಗಿದೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.