ದೇಹದ ತೂಕ ಇಳಿಸಿ ಸ್ಲಿಮ್ and ಬ್ಯೂಟಿಫುಲ್ಲಾಗಿ ಕಾಣಲು ಇಲ್ಲಿದೆ ಸಿಂಪಲ್ ವಿಧಾನ:ಒಮ್ಮೆ ಮಾಡಿ ನೋಡಿ

ದೇಹದ ತೂಕ ಇಳಿಸಿ ಸ್ಲಿಮ್ ಆಂಡ್ ಬ್ಯುಟಿಫುಲ್ಲಾಗಿ ಕಾಣಲು ಏನಾದ್ರೂ ಸರಳ ವಿಧಾನಗಳಿದ್ದರೆ ತಿಳಿಸಿ ಎನ್ನುವುದು ಉಡುಪಿ Xpress  ಓದುಗರ ಬೇಡಿಕೆಯಾಗಿತ್ತು. ತೂಕ ಇಳಿಸುವ ಸಿಂಪಲ್ ಆಹಾರ ವಿಧಾನದ ಕುರಿತು ನಾವಿಲ್ಲಿ ಮಾಹಿತಿ ನೀಡಿದ್ದೇವೆ. ಒಮ್ಮೆ ಟ್ರೈಮಾಡಿ ನೋಡಿ.

ಈ ಸಲಾಡ್ ಮಾಡಿ ತಿನ್ನಿ:

 ಕತ್ತರಿಸಿದ ಕ್ಯಾರೆಟ್ 2 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಟೊಮೆಟೋ 2 ಟೀ ಚಮಚ, ಕತ್ತರಿಸಿದ ಸೌತೇಕಾಯಿ 2 ಟೀ ಚಮಚ, ಈರುಳ್ಳಿ 2 ಟೀ ಚಮಚ. ಶುಂಠಿ 1 ಟೀ ಚಮಚ, 2 ಹಸಿಮೆಣಸು, ಸೋಯಾ ಸಾಸ್ 1 ಟೀ ಚಮಚ, ನಿಂಬೆ ರಸ, ಉಪ್ಪು ಮತ್ತು ಸಕ್ಕರೆ ರುಚಿಗೆ ತಕ್ಕಷ್ಟು.

ಈ ಎಲ್ಲಾ ಪದಾರ್ಥಗಳನ್ನು ಒಟ್ಟಾಗಿ ಒಂದು ಪಾತ್ರೆಗೆ ಹಾಕಿ ಚನ್ನಾಗಿ ಮಿಶ್ರ ಮಾಡಿ ಸೇವಿಸಿ. ಇದರಿಂದ ನಿಮ್ಮ ತೂಕವೂ ಹತೋಟಿಯಲ್ಲಿರುತ್ತದೆ. ಮತ್ತು ಆರೋಗ್ಯಕ್ಕೂ ಒಳ್ಳೆಯದು. ದಿನಕ್ಕೊಂದು ಬಾರಿ ಊಟ ಅಥವಾ ತಿಂಡಿ ಬದಲು ಇದನ್ನು ಸೇವಿಸಿ ಆಮೇಲೆ ನೋಡಿ ಪರಿಣಾಮ

ಪಪ್ಪಾಯಿ ಬೆಸ್ಟ್:

 ಕತ್ತರಿಸಿದ 1 ಸಣ್ಣ ಪಪ್ಪಾಯ, 1 ಟೀ ಚಮಚ ಬಿಳಿ ವಿನೇಗರ್, 1 ಟೀ ಚಮಚ ಕೆಂಪು ಸಕ್ಕರೆ, 1 ಟೀ ಚಮಚ ಸಣ್ಣದಾಗಿ ಕತ್ತರಿಸಿದ ತುಳಸಿ ಮತ್ತು ಪುದೀನಾ ಎಲೆಗಳು

ಬಾಣಲೆಯಲ್ಲಿ ವಿನೇಗರ್ ಹಾಕಿ ಅದಕ್ಕೆ ಸಕ್ಕರೆ ಬೆರೆಸಿ ಚನ್ನಾಗಿ ಕಲಕಿ, ನಂತರ ಅದಕ್ಕೆ ಪಪ್ಪಾಯ ಹೋಳುಗಳನ್ನು ಹಾಕಿ. ಕಲಸಿ, ನಂತರ ಅದಕ್ಕೆ ತುಳಸಿ ಮತ್ತು ಪುದಿನಾ ಎಲೆಗಳ ಪುಡಿಯನ್ನು ಮೇಲಿನಿಂದ ಹಾಕಿ, ನಂತರ ಸೇವಿಸಿ. ಇದೂ ಆರೋಗ್ಯಕ್ಕೂ ಒಳ್ಳೆಯದು.

ಸೋಯಾ ತಂಪು ಕಾಫಿ: 

200ಎಂಎಲ್ ತಂಪಾಗಿರುವ ಸೋಯಾ ಹಾಲು, 2 ಟೀ ಚಮಚ ಫಿಲ್ಟರ್ ಕಾಫಿ, ಸಕ್ಕರೆ 2 ಟೀ ಚಮಚ, ಬಿಸಿ ನೀರು ಸ್ವಲ್ಪ ಸಕ್ಕರೆ, ಕಾಫಿ, ಮತ್ತು ಬಿಸಿ ನೀರನ್ನು ಒಟ್ಟಿಗೆ ಸೇರಿಸಿ ಚನ್ನಾಗಿ ಕಲಕಿ, ನಂತರ ಸೋಯಾ ಹಾಲನ್ನು ಸೇರಿಸಿ ಮಿಶ್ರ ಮಾಡಿ. ನಂತರ ಅದನ್ನು ಸ್ವಲ್ಪ ಸಮಯ ರೆಫ್ರಿಜರೇಟರ್‌ನಲ್ಲಿ ಇಡಿ. ನಂತರ ಅದನ್ನು ಸೇವಿಸಿ ನೀವಿಷ್ಟು ಮಾಡಿದರೆ ಸಾಕು. ಆದ್ರೆ ಒಂದು ದಿನ ಮಾಡಿ ಬಿಡೋದಲ್ಲ ಒಂದಷ್ಟು ತಿಂಗಳು ಮಾಡಿ ನೋಡಿ.ನಿಮ್ಮ ದೇಹದ ತೂಕ ಗ್ಯಾರಂಟಿ ಇಳಿಯುತ್ತೆ.