ಡಾ|| ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ಯುದ್ಧ ವಿಮಾನ ಪ್ರದರ್ಶನ- ಕೇಂದ್ರ ರಕ್ಷಣಾ ಸಚಿವರ ಭೇಟಿ ಮಾಡಿದ ಪೂಜಾರಿ

ಉಡುಪಿ: ಮುಜರಾಯಿ, ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಡಾ|| ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಯುದ್ಧ ವಿಮಾನವನ್ನು ಪದರ್ಶನ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ರವರನ್ನು ಭೇಟಿ ಮಾಡಿ ಚರ್ಚಿಸಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಅರಿವನ್ನು ಮೂಡಿಸಲು ಯುದ್ಧ ವಿಮಾನವನ್ನು ಡಾ|| ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಪ್ರದರ್ಶನ ಮಾಡಲು ಚರ್ಚಿಸಿದರು. ಇದರ ಜೊತೆಗೆ ರಾಜ್ಯದ ಎ ದರ್ಜೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಾವಿರ ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು […]

ಮಂಗಳೂರು: ಕಡಲ ತೀರದ ಕಣ್ಗಾವಲಿಗೆ ಅತ್ಯಾಧುನಿಕ ಹಡಗು

ಮಂಗಳೂರು: ಮಂಗಳೂರು ಕಡಲ ತೀರಕ್ಕೆ ಕಣ್ಗಾವಲಿಗಾಗಿ ಅತ್ಯಾಧುನಿಕ ಹಡಗು ವರಹ ಎಂಬ ಶಿಪ್ ಆಗಮಿಸಿದೆ. ಈ ನೂತನ ಶಿಪನ್ನು ಪಣಂಬೂರು ಕೋಸ್ಟ್‌ಗಾರ್ಡ್ ಕೇಂದ್ರದಲ್ಲಿ ಹಿರಿಯ ಅಧಿಕಾರಿ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜಿಭಿಯೆ, ಸಿಐಎಸ್ಎಫ್ ಅಧಿಕಾರಿ ಅಶುತೋಷ್ ಗೌರ್ ಮೊದಲಾದವರು ಉಪಸ್ಥಿತರಿದ್ದು ಸ್ವಾಗತಿಸಿದರು. ಇದು ಕರ್ನಾಟಕ ಕರಾವಳಿಯಲ್ಲಿ ಕಣ್ಗಾವಲು ಇಡಲಿದೆ. ಲಾರ್ಸನ್ ಆ್ಯಂಡ್ ಟರ್ಬೊ ಈ ನೂತನ ಹಡಗನ್ನು ನಿರ್ಮಿಸಿದೆ. ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲು ಇರಿಸಲು ಈ ಹಡಗು ಬಳಸಲಾಗುತ್ತದೆ. […]

ಜನರಿಗೆ ಕೊಳಚೆ ನೀರು ಕುಡಿಸ್ತಿದೆ ಹೆಮ್ಮಾಡಿ ಗ್ರಾ.ಪಂ! ಗ್ರಾಮಸ್ಥರು ಕಣ್ಣೀರಿಟ್ಟರೂ ನೀರು ಕೊಡದ ಪಂಚಾಯತ್

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಈ ಬಾರಿ ವಿಪರೀತ ಮಳೆ ಬಂದರೂ ಈ ಊರಿನ ಜನರು ಕುಡಿಯುವ ನೀರಿಗೆ ಬರೋಬ್ಬರಿ ೩೦೦ ರೂ. ಖರ್ಚು ಮಾಡಬೇಕು. ಕಳೆದ ಮೂರು ವಾರಗಳಿಂದ ಕುಡಿಯಲು ನೀರಿಲ್ಲದೆ ಹೈರಾಣಾಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಗಮನಕ್ಕೂ ತಂದಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಿದ್ದ ಆಡಳಿತ ಇಲ್ಲಿಯ ತನಕವೂ ನೀರು ಪೂರೈಸುವ ಗೋಜಿಗೆ ಹೋಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಕಷ್ಟಕ್ಕೆ ಸ್ಪಂದಿಸದ ಪಂಚಾಯತ್: ಇದು ಕುಂದಾಫುರ ತಾಲೂಕಿನ […]

ಜೆಪ್ಪು ಮಾರ್ಕೇಟ್ – ಎಂಪಾಸಿಸ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪು ಮಾರ್ಕೇಟ್ – ಎಂಪಾಸಿಸ್ ನಡುವಿನ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯರು ಗುದ್ದಲಿಪೂಜೆ ನಡೆಯಿತು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮಂಗಳೂರಿನ ಯಾವ ಭಾಗವೂ ಕೂಡ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿಯಬಾರದು‌. ಗುಜ್ಜರಕೆರೆಯ ಸಾರ್ವಜನಿಕರು ರಸ್ತೆ ಅಭಿವೃದ್ಧಿಗೊಳಿಸುವಂತೆ ಕೋರಿಕೊಂಡಿದ್ದರು. ಈಗ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ ಎಂದರು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳಾಗಬಹುದು ಆದರೆ ಅಭಿವೃದ್ಧಿಯ ದೃಷ್ಟಿಯಿಂದ […]

ಕತೆ ಬರೆಯುವ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ: ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ವಿಶ್ವ ವಿದ್ಯಾರ್ಥಿ ದಿನ (ಅಕ್ಟೋಬರ್ 15) ದ ಪ್ರಯುಕ್ತ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಇದರ ಕರ್ನಾಟಕ ಘಟಕವು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.