ಉಡುಪಿ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಜ್ಞಾನಸುಧಾದದ 24 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ರ್ಯಾಂಕ್ ಗಳಿಸಿದ್ದು, ಪ್ರಣವ್ ಗುಜ್ಜರ್ ಬಿಎಸ್ಸಿ ಎಗ್ರಿಯಲ್ಲಿ 6ನೇ ರ್ಯಾಂಕ್, ಇಂಜಿನಿಯರಿಂಗ್ನಲ್ಲಿ 68ನೇ ರ್ಯಾಂಕ್, ಬಿ.ಎನ್.ವೈ.ಎಸ್ನಲ್ಲಿ 100ನೇ ರ್ಯಾಂಕ್, ವೆಟರ್ನರಿಯಲ್ಲಿ 134ನೇ ರ್ಯಾಂಕ್, ಬಿ.ಫಾರ್ಮದಲ್ಲಿ 202ನೇ ರ್ಯಾಂಕ್ ಗಳಿಸಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಧನ್ವಿತ್ ನಾಯಕ್ 87ನೇ ರ್ಯಾಂಕ್, ಶ್ರೇಯಸ್ ಆರ್ ಗೌಡ 325ನೇ ರ್ಯಾಂಕ್, ಪ್ರಭಂಜನ್ ಎಸ್ ಬಾಬು 341ನೇ ರ್ಯಾಂಕ್, ಸಮೃದ್ಧ್ ನೆಲ್ಲಿ 349ನೇ ರ್ಯಾಂಕ್, ಸೂರ್ಯ ವಿ.ವಿ 353ನೇ ರ್ಯಾಂಕ್, ಸಾಯಿ ಲಿಖಿತ್ ರೆಡ್ಡಿ 370ನೇ ರ್ಯಾಂಕ್, ವೈಷ್ಣವಿ ಎಸ್ ಎಂ 420ನೇ ರ್ಯಾಂಕ್, ಚಿರಾಗ್.ಆರ್.ನಾಯಕ್ 499ನೇ ರ್ಯಾಂಕ್, ರೋಹಿತ್ ಹೆಗ್ಡೆ 623ನೇ ರ್ಯಾಂಕ್, ಅಮಿತ್.ಯು.ನಾಯಕ್ 631ನೇ ರ್ಯಾಂಕ್, ಧ್ರುವ ಪಿ.ಬಿ. 644ನೇ ರ್ಯಾಂಕ್, ತುಷಾರ್ ಜೆ ಮೂಲ್ಯ 652ನೇ ರ್ಯಾಂಕ್, ಸಮ್ಯಕ್ ರಾವ್ 691ನೇ ರ್ಯಾಂಕ್, ಎಂ. ಪಿ. ಪ್ರೀತಮ್ 711ನೇ ರ್ಯಾಂಕ್, ಹೇಮಶ್ರೀ ವಿ.ಎಂ 751ನೇ ರ್ಯಾಂಕ್, ಕೀರ್ತನಾ ಎಚ್ ಭಟ್ 807ನೇ ರ್ಯಾಂಕ್, ಪ್ರತೀಕ್ಷಾ ಪೈ 809ನೇ ರ್ಯಾಂಕ್, ತಿಲಕ್ ರಾವ್ 816ನೇ ರ್ಯಾಂಕ್, ಎನ್.ಜೀವನ್ ರೆಡ್ಡಿ 844ನೇ ರ್ಯಾಂಕ್, ಅಮೋಘ.ಎಸ್.ಆರ್ 897ನೇ ರ್ಯಾಂಕ್, ಪ್ರತೀಕ್ಷಾ ವಿ.ಎಂ 921ನೇ ರ್ಯಾಂಕ್, ವಿಶ್ವಾಸ್ ಎಂ 962ನೇ ರ್ಯಾಂಕ್, ಶಂಕರ್ ಪಟೇಲ್ 976ನೇ ರ್ಯಾಂಕ್ ಗಳಿಸಿದ್ದಾರೆ.
41 ವಿದ್ಯಾರ್ಥಿಗಳು 2 ಸಾವಿರದೊಳಗಿನ ರ್ಯಾಂಕ್, 103 ವಿದ್ಯಾರ್ಥಿಗಳು 5 ಸಾವಿರದೊಳಗಿನ ರ್ಯಾಂಕ್, 165 ವಿದ್ಯಾರ್ಥಿಗಳು 10ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ.
ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.